ಸ್ಯಾಂಡಲ್ ವುಡ್

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಟೋಫಿ ಅನಾವರಣ

ಸಿನಿಮಾ ವಿಮರ್ಷಕರು ನೀಡುವ ಪ್ರಶಸ್ತಿ ದೊಡ್ಡ ಗೌರವ, ನನಗಿನ್ನೂ ಏಕೆ ಕೊಡಲಿಲ್ಲ ಕಾಯ್ತಿದ್ದೇನೆ: ನಾಗತಿಹಳ್ಳಿ ಚಂದ್ರಶೇಖರ್ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಪ್ರಶಸ್ತಿ ಟೋಫಿ ಅನಾವರಣ, ಪಿಆರ್‌ಒ ವಿಜಯ್ ಕುಮಾರ್ ಗೆ ಸನ್ಮಾನ ಅತ್ಯುತ್ತಮ ಸಂಕಲನ ಅತ್ಯುತ್ತಮ ಸಂಭಾಷಣೆ ಅತ್ಯುತ್ತಮ ಛಾಯಾಗ್ರಹಣ ಅತ್ಯುತ್ತಮ ಗಾಯಕಿ Nominations : ಅತ್ಯುತ್ತಮ ಗಾಯಕ ಅತ್ಯುತ್ತಮ ಸಾಹಿತ್ಯ ಅತ್ಯುತ್ತಮ ಹಿನ್ನೆಲೆ ಸಂಗೀತ ಅತ್ಯುತ್ತಮ ಸಂಗೀತ ಅತ್ಯುತ್ತಮ ಚಿತ್ರಕಥೆ ಅತ್ಯುತ್ತಮ ಪೋಷಕ ನಟಿ ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಪುನೀತ್ ರಾಜಕುಮಾರ್ ಪ್ರಶಸ್ತಿ ) ಅತ್ಯುತ್ತಮ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಟೋಫಿ ಅನಾವರಣ Read More »

“ಪೋಲೀಸ್ ಕಂಪ್ಲೆಂಟ್” ಜೊತೆಗೆ ಮತ್ತೆ ಕನ್ನಡಕ್ಕೆ ಬಂದ ಸಂಜೀವ್ ಮೆಗೋಟಿ, ಆ್ಯಕ್ಷನ್ ಥ್ರಿಲ್ಲರ್ ಟೀಸರ್ ಬಿಡುಗಡೆ ಮಾಡಿದ ಪ್ರೇಮಾ

ಹಿಂದೆ ಟಾಲಿವುಡ್ ನಟ ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮೀ ಅಭಿನಯದ ‘ಆದಿಪರ್ವ’ ಸೇರಿದಂತೆ ಅನೇಕ ಹಿಟ್ ಚಿತ್ರಗಳ ನಿರ್ದೇಶನ ಮಾಡಿದ್ದ ಸಂಜೀವ್ ಕುಮಾರ್ ಮೆಗೋಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಬಾರಿ ಅವರು “ಪೋಲೀಸ್ ಕಂಪ್ಲೆಂಟ್” ಎನ್ನುವ ಚಿತ್ರ ನಿರ್ದೇಶಿಸಿದ್ದಾರೆ. ಇದರಲ್ಲಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರಿನಲ್ಲಿ ಅದ್ದೂರಿಯಾಗಿ ನಡೆಯಿತು. ಕನ್ನಡದ ಖ್ಯಾತ ನಟಿ ಪ್ರೇಮಾ ಚಿತ್ರದ ಟೀಸರ್

“ಪೋಲೀಸ್ ಕಂಪ್ಲೆಂಟ್” ಜೊತೆಗೆ ಮತ್ತೆ ಕನ್ನಡಕ್ಕೆ ಬಂದ ಸಂಜೀವ್ ಮೆಗೋಟಿ, ಆ್ಯಕ್ಷನ್ ಥ್ರಿಲ್ಲರ್ ಟೀಸರ್ ಬಿಡುಗಡೆ ಮಾಡಿದ ಪ್ರೇಮಾ Read More »

ಮಹಿಳಾದಿನದ ವಿಶೇಷ : ಮುಳ್ಳಿನ ಗುಲಾಬಿ ಪೋಸ್ಟರ್ ಬಿಡುಗಡೆ

ಹಿರಿಯನಟ ಅನಂತನಾಗ್, ಆರತಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಮುಳ್ಳಿನ ಗುಲಾಬಿ 1982ರಲ್ಲಿ ತೆರೆಕಂಡಿತ್ತು. 44 ವರ್ಷಗಳ ನಂತರ ಮತ್ತೊಮ್ಮೆ ಅದೇ ಹೆಸರಿನಲ್ಲಿ ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಒಂದು ಹೆಣ್ಣು ತನ್ನ ಕಾಲೇಜ್ ಲೈಫಲ್ಲಿ, ಚಿಕ್ಕ‌ ವಯಸಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಅತ್ತೆ, ಮಾವನ ಕಡೆಯಿಂದ ಏನೆಲ್ಲ ಕಿರುಕುಳ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಾಳೆ, ಕೊನೆಗೆ ಅದನ್ನೆಲ್ಲ ಎದುರಿಸಿ ಹೇಗೆ ಸಮಾಜದಲ್ಲಿ ಬೆಳೆದು ನಿಲ್ಲುತ್ತಾಳೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ.

ಮಹಿಳಾದಿನದ ವಿಶೇಷ : ಮುಳ್ಳಿನ ಗುಲಾಬಿ ಪೋಸ್ಟರ್ ಬಿಡುಗಡೆ Read More »

‘ಜೋಡೆತ್ತು’ಗಳ ಅಂತಿಮ ಹಣಾಹಣಿ

ಎರಡನೇ ಹಂತದ ಚಿತ್ರೀಕರಣ ಮುಗಿಸಿದ ಚಿತ್ರತಂಡ ಚಿಕ್ಕಣ್ಣ ಹಾಗೂ ತೆಲುಗಿನ ಸುನಿಲ್ ಪ್ರಮುಖ ಪಾತ್ರದಲ್ಲಿರುವ ಜೋಡೆತ್ತು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಛಾಯಾಗ್ರಾಹಕ ಸುಧಾಕರ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಒಟ್ಟಾರೆ ೬೮ ದಿನಗಳ ಕಾಲ, ಶೇ. ೮೦ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾರೇಕಟ್ಟೆಯಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ೯೦ರ ದಶಕದ ಹಳ್ಳಿ ಸೆಟ್ ಹಾಕಲಾಗಿದ್ದು, ಅಲ್ಲಿಯೇ ಸಾಕಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಚಿಕ್ಕಮಗಳೂರಿನಲ್ಲಿ ಮೊದಲ ಹಂತದ

‘ಜೋಡೆತ್ತು’ಗಳ ಅಂತಿಮ ಹಣಾಹಣಿ Read More »

ಲವ್ ಮಾಕ್ಟೇಲ್3: `ಮುದ್ದು ಮಗಳೇ’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ!

ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ಲವ್ ಮಾಕ್ಟೇಲ್೩’ ಚಿತ್ರ ಮಾರ್ಚ್ 19ರಂದು ತೆರೆಗಾಣಲಿದೆ. ವಾರದ ಹಿಂದಷ್ಟೇ ಟ್ರೈಲರ್ ಬಿಡುಗಡೆಗೊಳಿಸಿದ್ದ ಚಿತ್ರತಂಡವೀಗ, ಬಿಡುಗಡೆಯ ದಿನಗಳು ಹತ್ತಿರದಲ್ಲಿರುವಾಗಲೇ ಒಂದಿಡೀ ಚಿತ್ರದ ಆತ್ಮದಂಥಾಮುದ್ದು ಮಗಳೇ’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ಅಪ್ಪ ಮಗಳ ಬಂಧವನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡಿರುವ ಸಾಹಿತ್ಯ, ಅದಕ್ಕೊಪ್ಪುವ ಸಂಗೀತದ ಮೂಲಕ ಈ ಹಾಡು ಕೇಳುಗರನ್ನು ಸೆಳೆಯವಂತಿದೆ. ನಕ್ಕರೂ ಚೆಂದ ಅತ್ತರೂ ಚೆಂದ ಮುದ್ದಾದ ಬಂಧ ಈ ನನ್ನ ಕಂದ ಎಂಬಂಥಾ ಮಮತೆಯ ಸಾಲುಗಳಿರುವ

ಲವ್ ಮಾಕ್ಟೇಲ್3: `ಮುದ್ದು ಮಗಳೇ’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ! Read More »

ಚಿತ್ರೀಕರಣ ಮುಗಿಸಿಕೊಂಡ `ಲವ್ ಸೀಸನ್ಸ್’!

ಎಲ್ಲರ ಬದುಕಿಗೆ ಹತ್ತಿರಾದ ಕಥಾನಕವನ್ನು ನವಿರು ಪ್ರೇಮದ ಪರಿಧಿಯಲ್ಲಿ ಕಟ್ಟಿಕೊಟ್ಟಿರುವ ಲವ್ ಸೀಸನ್ಸ್’ ಚಿತ್ರ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವಲವ್ ಸೀಸನ್ಸ್’ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳತ್ತ ಹೊರಳಿಕೊಂಡಿದೆ. ಸಾಮಾನ್ಯವಾಗಿ ಕೆಲ ಸಿನಿಮಾಗಳನ್ನು ನೆಲಮೂಲದ ಕಥೆಯ ಮೂಲಕ ವಿಶೇಷವಾಗಿ ಗುರುತಿಸಲಾಗುತ್ತೆ. ಆದರೆ, ಲವ್ ಸೀಸನ್ಸ್’ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ ಗಲ್ಲಿ ಗಲ್ಲಿಯ ಕಥೆಯೆಂಬುದು ನಿರ್ದೇಶಕರ ಮಾತು. ರಂಗಭೂಮಿ ಮತ್ತು ಸಿನಿಮಾ ಜಗತ್ತಿನಲ್ಲಿ ಕಳೆದ ಹತ್ತು ವರ್ಷದಿಂದೀಚೆಗೆ ಕಾರ್ಯ

ಚಿತ್ರೀಕರಣ ಮುಗಿಸಿಕೊಂಡ `ಲವ್ ಸೀಸನ್ಸ್’! Read More »

ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡ `ಮ್ಯಾರೇಜ್ ಪಾರ್ಟಿ’!

ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಚಿತ್ರದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆಗಳ ನಂತರ ಚಯನ್ ಸಂಪೂರ್ಣ ಮನೋರಂಜನಾತ್ಮಕ ಕಥೆಯೊಂದಿಗೆ `ಮ್ಯಾರೇಜ್ ಪಾರ್ಟಿ’ ಎಂಬ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೀಗ ಸದ್ದುಗದ್ದಲವಿಲ್ಲದೆ ಮ್ಯಾರೇಜ್ ಪಾರ್ಟಿಯ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮ್ಯಾರೇಜ್ ಪಾರ್ಟಿ ಹಾಸ್ಯಪ್ರಧಾನ ಸಿನಿಮಾ. ಗಟ್ಟಿ ಕಥೆಯೊಂದಿಗೆ ಪ್ರತೀ ಹಂತದಲ್ಲಿಯೂ ಕಚಗುಳಿಯಿಡುವ ಕಾಮಿಡಿಯ ಮೂಲಕ ಈ ಚಿತ್ರವನ್ನು ಕಟ್ಟಿ ಕೊಡಲು ಚಯನ್ ಮುಂದಾಗಿದ್ದಾರೆ. ಒಂದೂರಿನಲ್ಲಿ ಘಟಿಸುವ

ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡ `ಮ್ಯಾರೇಜ್ ಪಾರ್ಟಿ’! Read More »

ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಪ್ರಶಸ್ತಿ

ಮುಂಬೈನಲ್ಲಿ ನಡೆದ IIFTC ಇಂಟರ್‌‌‌ನ್ಯಾಷನಲ್ ಕಾನ್‌ಕ್ಲೇವ್‌‌ನಲ್ಲಿ ಸಂಜು ವೆಡ್ಸ್ ಗೀತಾ-2 ಸಿನಿಮಾ ಕನ್ನಡದ ಸುಮಾರು 265 ಚಿತ್ರಗಳನ್ನ ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 60 ವಿವಿಧ ದೇಶಗಳಿಂದ ಆಯ್ಕೆ ಆದಂತಹ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್-ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿಯ ಚಿತ್ರ ಎಲ್ಲರ ದಿಲ್ ದೋಚಿರುವುದು ಹೆಮ್ಮೆಯ ವಿಷಯ. ಸಂಜು ವೆಡ್ಸ್ ಗೀತಾ.. 2011ರಲ್ಲಿ ತೆರೆಕಂಡ ಈ ಸಿನಿಮಾ ರಮ್ಯಾ-ಶ್ರೀನಗರ ಕಿಟ್ಟಿ ಜೋಡಿಯಿಂದ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಅದರಲ್ಲೂ ಡೈರೆಕ್ಟರ್ ನಾಗಶೇಖರ್ ಕಥೆ, ನಿರ್ದೇಶನ, ಮ್ಯೂಸಿಕ್

ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಪ್ರಶಸ್ತಿ Read More »

‘ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್

ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ.. ಗೌರಿ ಆರ್ಟ್ಸ್ ಪ್ರೊಡಕ್ಷನ್ ಚೊಚ್ಚಲ ಸಿನಿಮಾಗೆ ಕಿಚ್ಚ ಸಾಥ್… ‘ಸೆಲೆಬ್ರಿಟಿ’ಯಾಗಿ ಬಂದ ಯುವ ನಾಯಕ ಅಶ್ವಿನ್.. ಕನ್ನಡ ಚಿತ್ರರಂಗಕ್ಕೆ ಸದಾಭಿರುಚಿ ಸಿನಿಮಾ ನೀಡಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡಿರುವ ನಿರ್ಮಾಣ ಸಂಸ್ಥೆ ಗೌರಿ ಆರ್ಟ್ಸ್. ‌ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಇವೆಂಟ್ ನಿನ್ನೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಅಂದಹಾಗೇ ಸಿನಿಮಾಗೆ

‘ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್ Read More »

‘ಪ್ರೇಮದ ಊರಲಿ’ ಟೀಸರ್ ರಿಲೀಸ್. ಇಬ್ಬರು ನಾಯಕಿಯರ ಜೊತೆ ಶ್ರೀರಾಮ್ ಯಾನ!

ರಂಗಾಯಣ ರಘು-ಶ್ರೀರಾಮ್ ನಟನೆಯ ಪ್ರೇಮದ ಊರಲಿ ಟೀಸರ್ ರಿಲೀಸ್.. ಈ‌ ಹಿಂದೆ ಅಕ್ಷಿ ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮನೋಜ್ ಕುಮಾರ್ ಹೊಸ ಕಥೆಯೊಂದಿಗೆ ಬಂದಿದ್ದಾರೆ.‌ ಈ ಬಾರಿ ಅವರು ಮ್ಯೂಸಿಕ್ ಲವ್ ಸ್ಟೋರಿ ಕಥೆ ಹೇಳೋದಿಕ್ಕೆ ಹೊರಟಿದ್ದಾರೆ. ಈ ಸಿನಿಮಾಗೆ ಪ್ರೇಮದ ಊರಲಿ ಎಂಬ ಟೈಟಲ್ ಇಡಲಾಗಿದ್ದು, ನಿನ್ನೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಟೀಸರ್ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ರಂಗಾಯಣ ರಘು, ತಪ್ಪುಗಳನ್ನು ಮಾಡ್ತಾ ಹೋಗಿ ಜೀವನ ಕಲಿಯುವ ಪಾತ್ರದಲ್ಲಿ ನಾನು

‘ಪ್ರೇಮದ ಊರಲಿ’ ಟೀಸರ್ ರಿಲೀಸ್. ಇಬ್ಬರು ನಾಯಕಿಯರ ಜೊತೆ ಶ್ರೀರಾಮ್ ಯಾನ! Read More »

Scroll to Top