ಕೆ ಜಿ ಎಫ್ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿ ದ ರಾಕಿಂಗ್ ಸ್ಟಾರ್ ಯಶ್, ಕೆ ಜಿ ಎಫ್ 2 ಮೂಲಕ ಭಾರತದ ಅತೀ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಇದೀಗ ಹಾಲಿವುಡ್ ಲೆವೆಲ್ ಗೆ ಟಾಕ್ಸಿಕ್ ಚಿತ್ರ ತಯಾರಾಗಿದ್ದು, ರಾಮಾಯಣ ಚಿತ್ರದ ರಾವಣ ಪಾತ್ರದ ಮೂಲಕ ಕೂಡ ಹವಾ ಎಬ್ಬಿಸುತ್ತಿದ್ದಾರೆ.

ಬಸ್ ಡ್ರೈವರ್ ಮಗನಾಗಿ, ದೊಡ್ಡ ದೊಡ್ಡ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದ ಖಾಲಿ ಜೇಬಿನ ಹುಡುಗ ಇವತ್ತು 50 ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಕೌತುಕ. ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದೇ ಇದ್ದ ಯಶ್ ಇಂದು ದಕ್ಷಿಣ ಭಾರತದ ಭಾಷೆಗಳಲ್ಲದೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಸಲೀಸಾಗಿ ಸಂವಹನೆ ಮಾಡುವಷ್ಟು ಬೆಳೆದಿರುವುದು ಸೋಜಿಗ!

ಬಹುಷಃ ಯಶ್ ಅವರು ಎಲ್ಲಾ ಭಾಷೆಗಳ ಮೀಡಿಯಾಗಳ ಡಾರ್ಲಿಂಗ್ ಆಗಿರುವುದು ಇದೇ ಕಾರಣಕ್ಕೆ. ಕೆಲವು ತಿಂಗಳುಗಳ ಹಿಂದೆ ವಿದೇಶದ ಮೀಡಿಯಾಗಳಿಗೆ ಸಂದರ್ಶನ ಕೂಡ ನೀಡಿದ್ದರು.ಇಷ್ಟೆಲ್ಲಾ ಪೀಠಿಕೆಯ ಉದ್ದೇಶವೇನೆಂದರೆ ರಜತ್ ಶರ್ಮಾ ಅವರ ಜನಪ್ರಿಯ ಟಾಕ್ ಶೋ ‘ಆಪ್ ಕಿ ಅದಾಲತ್’ ನ ಈ ವಾರದ ಅತಿಥಿಯಾಗಿ ಯಶ್ ಭಾಗವಹಿಸಿರುವುದು
1992 ರಿಂದ ಸತತವಾಗಿ 33 ವರ್ಷ ಗಳಿಂದ ರಜತ್ ಶರ್ಮಾ ಅವರು ನಡೆಸಿ ಕೊಂಡು ಬರುತ್ತಿರುವ ‘ಆಪ್ ಕಿ ಆದಲಾತ್’ ಜೀ ಟಿವಿಯಲ್ಲಿ ಆ ಕಾಲದಲ್ಲಿ ಬಹು ಜನಪ್ರಿಯ ಟಾಕ್ ಶೋ. ವಾಜಪೇಯಿ, ಶಿವಸೇನೆ ಬಾಳ ಠಾಕ್ರೆ ನರೇಂದ್ರ ಮೋದಿ ಸೇರಿ ಅನೇಕ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಜೀ ಟಿ ವಿ ಯಿಂದ ಹೊರ ಬಂದ ನಂತರ,ಕೆಲವು ವರ್ಷಗಳಿಂದ ತಮ್ಮದೇ ಚಾನೆಲ್ ‘ಇಂಡಿಯಾ ಟಿವಿ ‘ ಯಲ್ಲಿ ಯಶಸ್ವಿಯಾಗಿ ರಜತ್ ಶರ್ಮಾ ನಡೆಸಿ ಕೊಂಡು ಬರುತ್ತಿದ್ದಾರೆ.

ಕೋರ್ಟ್ ಮಾದರಿಯ ಸೆಟ್ನಲ್ಲಿ ರಜತ್ ಶರ್ಮಾ ಎಸೆಯುವ ಪ್ರಶ್ನೆಗಳು ಯಾವುದೇ ಲಾಯರ್ ಗಿಂತ ಕಡಿಮೆ ಇರುವುದಿಲ್ಲ.ಈ ಟಾಕ್ ಶೋ ನಲ್ಲಿ ಭಾಗವಹಿಸಿರುವ ಮೊದಲ ಕನ್ನಡಿಗ ಯಶ್ ಅನ್ನುವ ಹೆಗ್ಗಳಿಕೆ ಕೂಡ ಇದೆ.ಇದೇ ಶನಿವಾರ ಪ್ರಸಾರವಾಗಲಿರುವ ಈ ಕಾರ್ಯಕ್ರಮದಲ್ಲಿ ಗೂಗ್ಲಿ ಹುಡುಗ ಯಶ್ ಯವ ರೀತಿ ರಜತ್ ಶರ್ಮಾ ಗೂಗ್ಲಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.




