ಕಳೆದ ವರ್ಷ ಬಾಲಿವುಡ್ ನಲ್ಲಿ ಬಿಡುಗಡೆಯಾಗಿ ಜನಮನ್ನಣೆ ಪಡೆದ ಆಮೀರ್ ಖಾನ್ ನಿರ್ಮಿಸಿ ಅಭಿನಯಿಸಿದ ‘ಸಿತಾರೆ ಜಮೀನ್ ಪರ್’ ಕೊನೆಗೂ ಓಟಿಟಿ ಗೆ ಬಂದಿದೆ. ಸೋನಿ ಲೈವ್ ಫ್ಲಾಟ್ ಫಾರಂ ಮೂಲಕ ಈಗ ಸ್ಟ್ರೀಮ್ ಆಗುತ್ತಿದೆ. ಕೆಲವು ವರ್ಷಗಳ ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದ ಆಮೀರ್ ಖಾನ್ ಗೆ ಈ ಚಿತ್ರ ಕೊಂಚ ಮಟ್ಟಿಗೆ ಚೈತನ್ಯ ನೀಡಿತ್ತು.
ಸ್ಪಾನೀಶ್ ಚಿತ್ರ ಚಾಂಪಿಯನ್ ಎಂಬ ಚಿತ್ರವನ್ನು ಆಧಾರಿಸಿ ಆರ್. ಎಸ್. ಪ್ರಸನ್ನ ನಿರ್ದೇಶಿಸಿದ ಈ ಚಿತ್ರವನ್ನು ಸ್ವತಃ ಅಮೀರ್ ಖಾನ್ ತಮ್ಮ ಆಮೀರ್ ಖಾನ್ ಪ್ರೊಡಕ್ಷನ್ ಮೂಲಕ ನಿರ್ಮಿಸಿದ್ದರು.ಬೌಧಿಕ ಅಸಾಮರ್ಥ್ಯ ಹೊಂದಿರುವ ಬಾಸ್ಕೆಟ್ ಬಾಲ್ ಟೀಮಿಗೆ ಕೋಚ್ ಆಗಿ ನಾಯಕ ಎದುರಿಸುವ ಸವಾಲುಗಳು, ಟೀಮ್ ನ್ನು ತಯಾರು ಮಾಡುವಾಗ ಉಂಟಾಗುವ ಹಾಸ್ಯ ಸನ್ನಿವೇಶಗಳನ್ನು ಕುರಿತಾದ ಚಿತ್ರ. ಇದಾಗಿದೆ.

ಬೌಧಿಕ ಅಸಾಮರ್ಥ್ಯ ಇರುವ ಒಂದಷ್ಟು ಜನರ ಕೈಲ್ಲಿ ಅದ್ಭುತ ಅಭಿನಯ ತೆಗೆಸಿರುವುದಕ್ಕೆ ಚಿತ್ರ ಬಿಡುಗಡೆಯಾದಾಗ ನಿರ್ದೇಶಕರ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ಸಿಕ್ಕಿತ್ತು.ಸುಮಾರು 90 ಕೋಟಿ ವೆಚ್ಚ ದಲ್ಲಿ ನಿರ್ಮಾಣವಾದ ಈ ಚಿತ್ರ ಥಿಯೇಟರ್ ಪ್ರದರ್ಶನದಿಂದ 250 ಕೋಟಿಗಿಂತಲೂ ಹೆಚ್ಚು ಗಳಿಕೆ ಕಂಡಿತ್ತು.
ಒ ಟಿ ಟಿ ಗಿಂತ ಮುಂಚೆ ಯೂಟ್ಯೂಬ್ ನಲ್ಲಿ ರಿಲೀಸ್.

ಅಮೀರ್ ಖಾನ್ ಈ ಚಿತ್ರವನ್ನು ಓಟಿಟಿ ಜೊತೆ ಡೀಲ್ ಮಾಡುವುದಕ್ಕಿಂತ ಮುಂಚೆ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದರು.
ನೂರು ರೂಪಾಯಿ ಪಾವತಿಸುವ ಮೂಲಕ ಸಿನಿಮಾ ನೋಡುವ ಅವಕಾಶ ವೀಕ್ಷಕರಿಗೆ ನೀಡಿದ್ದರು. ಅಮಿರ್ ಖಾನ್ ಅವರ ಹೊಸ ಪ್ರಯತ್ನ pay per view ಗೆ ನಿಜಕ್ಕೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು.ಈಗ ಚಿತ್ರ ಬಿಡುಗಡೆಯಾಗಿ ಸಾಕಷ್ಟು ದಿನಗಳ ನಂತರ ಸೋನಿ ಸಂಸ್ಥೆ ತಮ್ಮ ಓಟಿಟಿ ಫ್ಲಾಟ್ ಫಾರಂ ನಲ್ಲಿ ಬಿಡುಗಡೆ ಮಾಡಿದೆ. ವಿಭಿನ್ನ ಕಂಟೆಂಟ್ ಬಯಸುವ ವೀಕ್ಷಕರು ಒಮ್ಮೆ ಈ ಚಿತ್ರ ನೋಡಬಹುದು.
ಉಳಿದಂತೆ ಈ ವಾರ ನೆಟ್ ಫ್ಲಿಕ್ಸ್ ನಲ್ಲಿ ವೀರ್ ದಾಸ್ ಅಭಿನಯದ ‘ಹ್ಯಾಪಿ ಪಟೇಲ್ ಕತರ್ನಾಕ್ ಜಾಸೂಸ್’ ಎಂಬ ಕಾಮಿಡಿ ಪತ್ತೇದಾರಿ ಚಿತ್ರ ಈ ವಾರ ಸ್ಟ್ರೀಮ್ ಆಗುತ್ತಿದೆ. ರವಿಕಿಶನ್ ಅಭಿನಯದ ಕೋರ್ಟ್ ಡ್ರಾಮಾ’ ‘ಮಾಮ್ಲಾ ಲೀಗಲ್ ಹೈ ‘ವೆಬ್ ಸೀರೀಸ್ ನೆಟ್ ಫ್ಲಿಕ್ಸ್ ನಲ್ಲಿ ಶುರುವಾಗಿದೆ.’

ಬಾಬುಜೀ ಘರ್ ಪರ್ ಹೈ ‘ಎನ್ನುವ ಕಾಮಿಡಿ ಫ್ಯಾಮಿಲಿ ಡ್ರಾಮಾವನ್ನು Zee 5 ನಲ್ಲಿ ನೋಡಿ ಆನಂದಿಸಬಹುದು.

