ರಾಮಾಯಣದಲ್ಲಿ ಸೀತೆ ಪಾತ್ರ ರಾಧಿಕಾ ಪಂಡಿತ್ ಮಾಡಬೇಕಿತ್ತು?

ಟಾಕ್ಸಿಕ್ ಟ್ರೈಲರ್ ಬೆಂಗಳೂರಿನಲ್ಲಿ ಲಾಂಚ್ ಆಗಿ 4 ದಿನಗಳು ಕಳೆದಿವೆ. ಟ್ರೈಲರ್ ಬಿಡುಗಡೆಯಾಗಿ 24 ಗಂಟೆಗಳಲ್ಲಿ ಎಲ್ಲಾ ಭಾಷೆಗಳಲ್ಲಿ 52 ಮಿಲಿಯನ್ ಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದು ಈಗಲೂ ಟ್ರೈಲರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇದಕ್ಕಿಂತಲೂ ವಿಶೇಷವಾಗಿ ಸಮಾರಂಭದ ಕೆಲವು ವಿಷಯಗಳ ಬಗ್ಗೆ ಟ್ರೋಲ್ ಪೇಜ್, ಇನ್ಸ್ಟಾಗ್ರಾಮ್ , ಸೋಶಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಗಳ

ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಳ್ಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಸಮಾರಂಭದಲ್ಲಿ ಗಮನ ಸೆಳೆದಿದ್ದು ವಿಶೇಷ.ಲಕ್ಷಣವಾಗಿ ಸೀರೆ ಉಟ್ಟು ಬಂದಿದ್ದ ರಾಧಿಕಾರನ್ನು ನೋಡಿ ಮಾಡ್ ಡ್ರೆಸ್ನಲ್ಲಿ ಬಂದಿದ್ದ ಚಿತ್ರದ ನಾಯಕಿಯರು ಆಕೆಯಿಂದ ಕಲಿಯಬೇಕಾಗಿದೆ ಎಂದು ವಿಡಿಯೋಗಳಲ್ಲಿ ಕಾಮೆಂಟ್ ಮಾಡಿದ್ದಾರೆ

ಕೆಲವರು ಆಕೆಯ ಸೌಂದರ್ಯ ಮತ್ತು ಗ್ರೇಸ್ ನೋಡಿ ‘ರಾಮಾಯಣ ‘ ಚಿತ್ರದಲ್ಲಿ ಸೀತೆಯ ಪಾತ್ರ ರಾಧಿಕಾ ಮಾಡಬೇಕಿತ್ತು, ಸಾಯಿ ಪಲ್ಲವಿಗಿಂತಲೂ ಆ ಪಾತ್ರ ಆಕೆಗೆ ಪಕ್ಕಾ ಒಪ್ಪುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ರಾಧಿಕಾ ಪಂಡಿತ್ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಮಕ್ಕಳ ಪಾಲನೆಗೆ ಒತ್ತು ಕೊಟ್ಟು ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು. ಯಶ್ ಅವರ ಬೆಳವಣಿಗೆಗೆ ಆರಂಭದಿಂದಲೂ ಬೆನ್ನೆಲುಬಾಗಿ ನಿಂತಿದ್ದ ರು ಇದೇ ವಿಷಯವನ್ನು ಟ್ರೈಲರ್ ಬಿಡುಗಡೆಯ ಸಮಾರಂಭದಲ್ಲಿ ನಯನ್ ತಾರಾ ಕೂಡ ಮಾತಾಡಿ ರಾಧಿಕಾ ಬಗ್ಗೆ ಒಳ್ಳೆ ಮಾತನಾಡಿ ದ್ದರು . ಬೇರೆ ರಾಜ್ಯಗಳಿಂದ ಬಂದ ಮೀಡಿಯಾ ಮಂದಿ ಮತ್ತು ಇನ್ಫ್ಯೂಯೆನ್ಸರ್ ಗಳು ಯಶ್ ಮತ್ತು ರಾಧಿಕಾ ಜೋಡಿ ಬಗ್ಗೆ ಇಂಪ್ರೆಸ್ ಅಗಿದ್ದು ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿಹರಿದಾಡುತ್ತಿದ್ದು ವೈರಲ್ ಆಗಿವೆ

support our advertisers
Scroll to Top