ನಾಡಪ್ರಭು ಕೆಂಪೇಗೌಡರ ಬದುಕು ತೆರೆಗೆ; ‘ಕೆಂಪಾಂಬುಧಿ’ ಟೀಸರ್ ರಿಲೀಸ್, ಪ್ರೇಮ್‌ಗೆ ಐತಿಹಾಸಿಕ ಪಾತ್ರ
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜೀವನ, ದೂರದೃಷ್ಟಿ ಮತ್ತು ಪರಂಪರೆಯನ್ನು ಆಧರಿಸಿದ ‘ಕೆಂಪಾಂಬುಧಿ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ‘ನೆನಪಿರಲಿ’ ಪ್ರೇಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಐತಿಹಾಸಿಕ ಕಥೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಪ್ರಯತ್ನವಾಗಿದೆ. ‘ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್’ ಪ್ರಸ್ತುತಪಡಿಸಿರುವ ಈ ಚಿತ್ರಕ್ಕೆ ‘ಹೊಂಬಾಳೆ ಮ್ಯೂಸಿಕ್’ ಸಹಯೋಗ ನೀಡಿದೆ. ರಮೇಶ್ ಬೇಗಾರ್ ನಿರ್ದೇಶನದ ಚಿತ್ರದಲ್ಲಿ ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ನಾಗಶ್ರೀ ಬೇಗಾರ್, ಸಂಯುಕ್ತಾ ಹೊರನಾಡು, ರಾಜೇಂದ್ರ ಕಾರಂತ್, […]
ನಾಡಪ್ರಭು ಕೆಂಪೇಗೌಡರ ಬದುಕು ತೆರೆಗೆ; ‘ಕೆಂಪಾಂಬುಧಿ’ ಟೀಸರ್ ರಿಲೀಸ್, ಪ್ರೇಮ್‌ಗೆ ಐತಿಹಾಸಿಕ ಪಾತ್ರ Read More »

