ನನಗೆ ಸಿನಿಮಾವೇ ಜೀವನ. ಸಿನಿಮಾ ಬಿಡುಗಡೆ ಆಗದಿದ್ದಾಗ ಹೆಚ್ಚು ನೋವು ಅನುಭವಿಸೋದು ನಾನೇ: ಕಿಚ್ಚ ಸುದೀಪ್

ಸಿನಿಮಾ ವಿಳಂಬ ಆಗುವುದು ಉದ್ದೇಶಪೂರ್ವಕವಾಗಿ ಅಲ್ವೇ ಅಲ್ಲ, ನನಗೆ ಸಿನಿಮಾವೇ ಜೀವನ. ನನ್ನ ಸಿನಿಮಾ ಬಿಡುಗಡೆಯಾಗದಿದ್ದಾಗ ನನಗಿಂತ ಹೆಚ್ಚು ಬೇರೆ ಯಾರೂ ನೋವು ಅನುಭವಿಸುವುದಿಲ್ಲ ಎಂದು ಕಿಚ್ಚ ಸುದೀಪ್ ಭಾವುಕರಾಗಿ ನುಡಿದಿದ್ದಾರೆ.


‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರ ನಿರೂಪಕರಾಗಿ ಮತ್ತೆ ಕಿರುತೆರೆಗೆ ಮರಳಲು ಸಜ್ಜಾಗಿರುವ ಸುದೀಪ್ ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದಾರೆ. ಸಿನಿಮಾ ಬಿಡುಗಡೆಯಾಗದೇ ಇರುವುದರಿಂದ ಚಿತ್ರರಂಗದ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬರ್ಥವಲ್ಲ ಎಂದು ಹೇಳಿರುವ ಸುದೀಪ್ ಈ ಸೀಸನ್‌ ಬಗ್ಗೆ ನನಗೆ ನಿಜಕ್ಕೂ ಸಂತೋಷವಿದೆ. ‘ಬಿಗ್‌ ಬಾಸ್‌’ ನಿರೂಪಣೆ ಮತ್ತು ಸಿನಿಮಾದ ಕೆಲಸ ಎರಡನ್ನೂ ಸುಲಭವಾಗಿ ನಿರ್ವಹಿಸಬಹುದು” ಎಂದು ಹೇಳಿದ್ದಾರೆ.
ಕಳೆದ ವರ್ಷ ‘ಮಾರ್ಕ್‌’ ಸಿನಿಮಾದ ಚಿತ್ರೀಕರಣದ ವೇಳೆ ಮಹಾಬಲಿಪುರಂನಿಂದ ‘ಬಿಗ್‌ ಬಾಸ್‌’ ನಿರೂಪಣೆಗೆ ಅವರು ಪ್ರಯಾಣಿಸುತ್ತಿದ್ದರು. ಈ ವರ್ಷ, ಅನುಪ್ ಭಂಡಾರಿ ನಿರ್ದೇಶನದ ಬಿಲ್ಲಾ ರಂಗ ಬಾಷಾ ನಿರ್ಮಾಣ ಹಂತದಲ್ಲಿದ್ದು, ಅವರ ಸೆಟ್ ಬಿಗ್ ಬಾಸ್ ಮನೆಯಿಂದ ಕೇವಲ 15 ನಿಮಿಷಗಳ ದೂರದಲ್ಲಿದೆ.


ಬಹುಮಾನದ ಮೊತ್ತದಲ್ಲಿ ಬದಲಾವಣೆ ಇಲ್ಲ ಏಕೆ?
ಬಿಗ್​​ಬಾಸ್ ಕನ್ನಡ 13ನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ. ಕಾರ್ಯಕ್ರಮದ ನಿರೂಪಕ ಸುದೀಪ್ ಅವರು ಬಹುಮಾನದ ಮೊತ್ತದ (ಕುರಿತಾಗಿ ಮಾತನಾಡಿದ್ದಾರೆ.
ಇಂದು (ಆಗಸ್ಟ್ 30) ಬಿಗ್​​ಬಾಸ್ ಕನ್ನಡ ಸೀಸನ್ 13ರ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜಿತವಾಗಿದ್ದು, ಸುದೀಪ್ ಅವರಿಗೆ ಬಹುಮಾನದ ಮೊತ್ತದ ಕುರಿತಾದ ಪ್ರಶ್ನೆ ಎದುರಾಯ್ತು. ಸುದೀಪ್ ಅವರು ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಈ ವರೆಗೆ 12 ಸೀಸನ್ ನಡೆದಿವೆ. ಎಲ್ಲ ಸೀಸನ್​​ಗಳಲ್ಲಿಯೂ ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನದ ಮೊತ್ತ ನೀಡಲಾಗುತ್ತದೆ. 2013 ರಲ್ಲಿ ನಡೆದಿದ್ದ ಮೊದಲ ಸೀಸನ್​​ ವಿನ್ನರ್​​ಗೂ 50 ಲಕ್ಷವನ್ನೇ ಬಹುಮಾನವಾಗಿ ನೀಡಲಾಗಿತ್ತು. ಈಗಲೂ ಸಹ ಅಷ್ಟೇ ಮೊತ್ತವನ್ನು ನೀಡಲಾಗುತ್ತಿದೆ.
ಅಪಾರ್ಟ್‌ಮೆಂಟ್‌, ಕಾರು ನೀಡಿದ್ದೇವೆ. ಮೊದಲು ಇದ್ಯಾವುದು ಇರಲಿಲ್ಲ. ಕನ್ನಡ, ಹಿಂದಿ ತೆಲಗು ಭಾಷೆಯಲ್ಲಿ ಇಷ್ಟು ಕೊಡುತ್ತಿದ್ದಾರೆ ಎನ್ನುವ ಪ್ರಶ್ನೆ ಬರುತ್ತದೆ. ಇದೆಲ್ಲ ಒಂದು ಫಾರ್ಮ್ಯಾಟ್.. ಅದು ಹಾಗೆ ಮುಂದುವರೆಯುತ್ತದೆ. ಈ ಸಲನೂ ವಿಜೇತರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಇರಲಿದೆ. ಇದೊಂದು ಫಾರ್ಮ್ಯಾಟ್ ಇದೇ ಮುಂದುವರೆಯುತ್ತದೆ. ಇದರ ಜತೆ 5 ಲಕ್ಷ ರೂಪಾಯಿ ಸ್ಪಾನ್ಸರ್ಸ್‌ಗಳಿಂದ ಇರುತ್ತದೆ ಎಂದು ಹೇಳಿದ್ದಾರೆ.

support our advertisers
Scroll to Top