ಟಾಕ್ಸಿಕ್ ಚಿತ್ರಕ್ಕೆ ಪ್ರಚಾರದ ಅಗತ್ಯ ಇಲ್ವಾ?

ಟಾಕ್ಸಿಕ್ ಬಿಡುಗಡೆಗೆ ದಿನ ಗಣನೆ ಆರಂಭವಾಗಿದೆ. ಈ ತಿಂಗಳ 26ರಂದು ಜಗತ್ತಿನದಾದ್ಯಂತ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದು, ಪ್ರಪಂಚದಾದ್ಯಂತ 12000ಕ್ಕೂ ಹೆಚ್ಚಿನ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ವಿದೇಶಗಳಲ್ಲಿ ಈಗಾಗಲೇ ಬುಕಿಂಗ್ ಓಪನ್ ಆಗಿದ್ದು USA, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಮುಂತಾದ ದೇಶಗಳಲ್ಲಿ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟು ಹಾಕಿದೆ.ಆದರೆ ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ತಡವಾಗಿ ಅಂದರೆ 21ನೇ ತಾರೀಕಿಗೆ ಆರಂಭ ಗೊಳ್ಳಲಿದೆ.

ಕರ್ನಾಟಕದಲ್ಲಿ ಪ್ರಮೋಷನ್ ಕಡಿಮೆ ಆಯ್ತಾ?

ಒಂದು ಸಿನಿಮಾ ಅಂದರೆ ಮುಹೂರ್ತದಿಂದ ಹಿಡಿದು,ಪ್ರೀ ರಿಲೀಸ್ ಈವೆಂಟ್ ನವರೆಗೆ ಚಿತ್ರದ ನಿರ್ಮಾಪಕರು ಸಾಕಷ್ಟು ಕಾರ್ಯಕ್ರಮಗಳನ್ನು, ಪ್ರಮೋಷನ್ ಕೆಲಸಗಳನ್ನು ಮಾಡುತ್ತಾರೆ. ಆದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಟ್ರೈಲರ್ ಲಾಂಚ್ ಕಾರ್ಯಕ್ರಮ ಬಿಟ್ಟರೆ ಯಾವುದೇ ರೀತಿಯ ಪ್ರಮೋಷನ್ ಮಾಡಿಲ್ಲ. ಟ್ರೈಲರ್ ರಿಲೀಸ್ ಈವೆಂಟ್ ಗೆ ಕೂಡ ಕೆಲವು ಪ್ರಮುಖ ಮೀಡಿಯಾ ದವರನ್ನು ಆಹ್ವಾನಿಸಿದ್ದು ಬಿಟ್ಟರೆ ಬೆಂಗಳೂರಿನ ಎಲ್ಲಾ ಪ್ರಕಾರದ ಮಾಧ್ಯಮಗಳಿಗೆ ಆಹ್ವಾನವಿರಲಿಲ್ಲ. ಬಹುಷಃ ಚಿತ್ರದ ಬಗ್ಗೆ ಇರುವ ಈಗಿನ ಕ್ರೇಜ್ ಮತ್ತು ಹೈಪ್ ನೋಡಿದರೆ ಚಿತ್ರದ ನಿರ್ಮಾಪಕರಿಗೆ ಹೆಚ್ಚಿನ ಪ್ರಚಾರ ಮಾಡುವ ಅಗತ್ಯವಿಲ್ಲ ವೆನಿಸುತ್ತದೆ.

ಈ ಹಿಂದೆ ಕಾಂತರ ಚಾಪ್ಟರ್ 1 ಬಂದಾಗ ಕೂಡ ಹೊಂಬಾಳೆ ಸಂಸ್ಥೆ ಇದೇ ನೀತಿಯನ್ನು ಅನುಸರಿಸಿತ್ತು. ಟಾಕ್ಸಿಕ್ ಪಬ್ಲಿಸಿಟಿ ವಿಷಯಕ್ಕೆ ಬಂದಾಗ ಹಳೆಯ ಪ್ರಚಾರ ಸಂಪ್ರದಾಯದ ಬದಲಾಗಿ ನಿರ್ಮಾಣ ಸಂಸ್ಥೆ ಮೆಟ್ರೋ, ಮಾಲ್, ಎಲ್ ಈ ಡಿ ಹೊರ್ಡಿಂಗ್ ಗಳ ಮೊರೆ ಹೋಗಿದ್ದಾರೆ.

ದೇಶದ 25 ಪ್ರಮುಖ ನಗರಗಳ ಪ್ರಮುಖ ಪ್ರದೇಶಗಳಲ್ಲಿ ಚಿತ್ರದ ಬಿಲ್ ಬೋರ್ಡ್ ಗಳನ್ನು ಲಗತ್ತಿಸಲಾಗಿದೆ.ಅಂದ ಹಾಗೆ ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಇವೆಂಟ್ ನಲ್ಲಿ ಇವೆಂಟ್ ಏರ್ಪಡಿಸಿದ ಚಿತ್ರ ತಂಡ ಹೈದರಾಬಾದ್ನಲ್ಲಿ ಇದೇ ತಿಂಗಳು 22ರಂದು ತೆಲುಗಿನ ಚಿತ್ರ ಪ್ರೇಮಿಗಳಿಗಾಗಿ ಪ್ರಿ ರಿಲೀಸ್ ಇವೆಂಟ್ ಏರ್ಪಡಿಸಿದೆ.

ಯಶ್ ಅಭಿಮಾನಿಗಳ ತಯಾರಿ ಹೇಗಿದೆ?ನಾಲ್ಕು ವರ್ಷಗಳ ನಂತರ ತಮ್ಮ ನೆಚ್ಚಿನ ರಾಕಿ ಬಾಯ್ ತೆರೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿರುವ ಕೆಲವು ಯಶ್ ಅಭಿಮಾನಿಗಳಿಗೆ ಚಿತ್ರ ತಂಡ ಅಗ್ರೆಸ್ಸಿವ್ ಆಗಿ ಪ್ರಮೋಷನ್ ಮಾಡುತ್ತಿಲ್ಲ ಎಂಬ ಅಸಮಾಧಾನ ಇದೆ.ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಚಿತ್ರದ ಹಾಡುಗಳ ಜೂಕ್ ಬಾಕ್ಸ್ ರಿಲೀಸ್ ಮಾಡಿದಾಗ ಕೂಡ, ಕನಿಷ್ಠ ಪ್ರತೀ ಹಾಡಿನ ಲಿರಿಕಲ್ ವಿಡಿಯೋ ಬಿಡಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ಬಿಡುಗಡೆಗೆ ಕೆಲವೇ ದಿನಗಳು ಇರುವುದರಿಂದ ನಿರ್ಮಾಪಕರು ಎಲ್ಲಾ ಹಾಡುಗಳನ್ನು ಒಂದೊಂದಾಗಿ ಬಿಟ್ಟಿಲ್ಲವೆನಿಸುತ್ತಿದೆ.

ಒಟ್ಟಿನಲ್ಲಿ ಯಶ್ ‘ಆಪ್ ಕಿ ಅದಾಲತ್ ‘ ಕಾರ್ಯಕ್ರಮದಲ್ಲಿ ಹೇಳಿರುವಂತೆ ನನ್ನ ಅಭಿಮಾನಿಗಳು ನನ್ನ ಸಿನಿಮಾ ವನ್ನು ಟಿಕೆಟ್ ತೆಗೆದು ಕೊಂಡು ಸಿನಿಮಾ ನೋಡಿ ಗೆಲ್ಲಿಸಿ ಸಂಭ್ರಮ ಪಟ್ಟರೆ ಸಾಕು, ಬೇರೆ ಯಾವುದೇ ರೀತಿಯಲ್ಲಿ ತನ್ನನ್ನು ಮೆರೆಸುವ ಅಗತ್ಯವಿಲ್ಲ ಎಂದಿದ್ದಾರೆ. ಬಹುಷಃ ಯಶ್ ಅಭಿಮಾನಿಗಳು ಅವರ ಮಾತಿನಂತೆ ನಡೆದು ಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು.

support our advertisers
Scroll to Top