MOVIE REVIEW: ಬ್ಯಾಂಕ್ ಹಗರಣದ ಕಥೆ ಹೇಳುವ “ಸ್ಪಾರ್ಕ್”

ಚಿತ್ರ: ಸ್ಪಾರ್ಕ್
ನಿರ್ದೇಶನ: ಮಹಂತೇಶ್ ಹಂದ್ರಾಳ್
ನಿರ್ಮಾಣ: ಗರಿಮಾ ಅವಿನಾಶ್ ವಸಿಷ್ಠ
ತಾರಾಗಣ: ನಿರಂಜನ್ ಸುಧೀಂದ್ರ, ನೆನಪಿರಲಿ ಪ್ರೇಮ್, ರಚನಾ ಇಂದರ್, ಭಾವನಾ ಮೆನನ್, ರಮೇಶ್ ಇಂದಿರಾ, ಧರ್ಮಣ್ಣ ಕಡೂರು, ಅಶ್ವಿನ್ ಹಾಸನ್ ಮತ್ತಿತರರು
ರೇಟಿಂಗ್: 3/5
***

ಸಹಕಾರಿ ಬ್ಯಾಂಕ್ ಒಂದರಲ್ಲಿಟ್ಟ ಹಣವೆಲ್ಲವನ್ನೂ ರಾಜಕೀಯ ದುರುದ್ದೇಶದಿಂದ ಬಳಕೆ ಮಾಡಲಾಗಿದೆ. ಅದರ ಸುಳಿವು ದೊರಕಿದಾಗ ಖಾಸಗಿ ವಾಹಿನಿ ತನಿಖಾ ಪತ್ರಕರ್ತ ಅಭಿರಾಮ್ (ನಿರಂಜನ್ ಸುಧೀಂದ್ರ) ಇದರ ಸತ್ಯಾಸತ್ಯತೆ ಬೇಧಿಸಲು ನಿಲ್ಲುತ್ತಾನೆ. ಈ ವೇಳೆ ಪೊಲೀಸ್ ಅಧಿಕಾರಿ ರಂಜಿತ್ ಕುಮಾರ್ (ನೆನಪಿರಲಿ ಪ್ರೇಮ್) ಈ ಬ್ಯಾಂಕ್ ಹಗರಣದ ತನಿಖೆ ಕೈಗೊಂಡಿರುತ್ತಾನೆ. ಇಬ್ಬರಲ್ಲಿ ಯಾರು ಮೊದಲು ಸತ್ಯ ಹೊರಗೆಳೆಯುತ್ತಾರೆ ಎನ್ನುವುದನ್ನು ನೀವು ಚಿತ್ರಮಂದಿರದಲ್ಲಿ “ಸ್ಪಾರ್ಕ್” ಸಿನಿಮಾ ನೋಡಿ ತಿಳಿದುಕೊಳ್ಳಬಹುದು.


ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟನೆಯ “ಸ್ಪಾರ್ಕ್” ಒಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ನೇರವಾಗಿ ತೆರೆದುಕೊಳ್ಳುವ ಕಥೆ, ಕ್ಲೈಮ್ಯಾಕ್ಸ್‌ವರೆಗೂ ಒಂದೇ ವೇಗದಲ್ಲಿ ಸಾಗುವುದು ಈ ಚಿತ್ರದ ಪ್ಲಸ್ ಪಾಯಿಂಟ್. ಅಲ್ಲದೆ, ಕೊನೆಯವರೆಗೂ ಅಸಲಿ ವಿಲನ್ ಯಾರು ಎಂಬ ಗುಟ್ಟನ್ನು ಕಾಪಾಡಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ ಮತ್ತು ಸಚಿನ್ ಬಸ್ರೂರು ಸಂಗೀತ ಈ ಸಿನಿಮಾವನ್ನು ತಾಂತ್ರಿಕವಾಗಿ ಗಟ್ಟಿಗೊಳಿಸಿವೆ.


ನೆನಪಿರಲಿ ಪ್ರೇಮ್ ಪಾತ್ರ ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ಉಳಿಸಿಕೊಂಡು ಹೋಗುತ್ತದೆ. ನಾಯಕನಾಗಿ ನಿರಂಜನ್ ಪತ್ರಕರ್ತನ ಪಾತ್ರದಲ್ಲಿ ಮಿಂಚಿದ್ದಾರೆ. ಫ್ರೇಮ್ ಮತ್ತು ನಿರಂಜನ್ ನಡುವಿನ ಸ್ಪರ್ಧೆ ಪ್ರೇಕ್ಷಕರ ಮನ ಗೆಲ್ಲುತ್ತದೆ. ನಾಯಕಿ ರಚನಾ ಕೂಡ ಅಭಿನಯದಲ್ಲಿ ಪಡುತ್ತಿರುವುದು ಕಾಣುತ್ತದೆ. ಉಳಿದಂತೆ ಧರ್ಮಣ್ಣ ಕಡೂರು, ರಮೇಶ್ ಇಂದಿರಾ, ಬಾಲರಾಜವಾಡಿ, ನೀನಾಸಂ ಅಶ್ವತ್ಥ್ ಮತ್ತು ಅಶ್ವಿನ್ ಹಾಸನ್ ಸೇರಿದಂತೆ ಇಡೀ ತಾರಾಗಣ ತಮ್ಮ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸಿದೆ. ಒಟ್ಟಿನಲ್ಲಿ ಚಿತ್ರಮಂದಿರದಲ್ಲಿ ಒಮ್ಮೆ ನೋಡಿ ಎಂಜಾಯ್ ಮಾಡಬಹುದಾದ ಚಿತ್ರ ಇದಾಗಿದೆ.

support our advertisers
Scroll to Top