ಲವ್ ಸೀಸನ್ಸ್ ಈ ರಿಸನ್ಸ್ ಗೆ ಇಷ್ಟವಾಗ ಬಹುದು

ಲವ್ ಸಬ್ಜೆಕ್ಟ್ ಕಥೆಗಳು ಸಿನಿ ಪ್ರೇಕ್ಷಕರಿಗೆ ಹೊಸದೇನಲ್ಲ. ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಕೆಲವು ಕಥೆಗಳು ಸುಖಾಂತ ಕಂಡರೆ, ಹೆಚ್ಚಿನ ಲವ್ ಕೇಸ್ ಗಳು ಹಳ್ಳ ಹಿಡಿಯುತ್ತವೆ.ಈ ವಾರ ಬಿಡುಗಡೆಯಾಗಿರುವ ‘ಲವ್ ಸೀಸನ್ಸ್ ‘ ಕೂಡ ಒಂದು ವಿಶಿಷ್ಟ ಲವ್ ಸಬ್ಜೆಕ್ಟ್ ನ್ನು ಆಧರಿಸಿ ಮಾಡಿದ ಸಿನಿಮಾ

. ಚಿತ್ರದ ನಾಯಕ ರಾಮು (ಮುಕುಂದ ರಾಮಸ್ವಾಮಿ ) ಅನಾಥಾಶ್ರಮದಲ್ಲಿ ಬೆಳೆದು ವಿದ್ಯೆ ಬಗ್ಗೆ ಗಮನ ಕೊಡದೆ ಲವ್ ನಲ್ಲಿ ಬಿದ್ದು ಆಶ್ರಮದಿಂದ ದೂರವಾಗಿ ಪ್ರೀತಿ ವಿಷಯದಲ್ಲೂ ಅನಾಥನಾಗುತ್ತಾನೆ. ತನ್ನ ಪ್ರಾಮಾಣಿಕ ಪ್ರೀತಿಗೆ ಬೆಲೆ ಸಿಗದೇ, ಲವ್ ಮೇಲೆ ಆಸಕ್ತಿ ಕಳೆದು ಕೊಂಡಾಗ,ರಾಮುವಿನ ಜೀವನದಲ್ಲಿ ಮೇರಿ ಎಂಬ ನಿಸ್ಕಲ್ಮಷ ಮನಸ್ಸಿನ ಹುಡುಗಿಯ ಪ್ರವೇಶವಾಗುತ್ತದೆ. ಆಕೆಯ ನಿಜವಾದ ಪ್ರೀತಿಯ ಅರಿವು ಮೂಡುವ ಹೊತ್ತಿಗೆ ತುಂಬಾ ತಡವಾಗಿರುತ್ತದೆ. ರಾಮು ತಾನು ಮಾಡಿದ ತಪ್ಪು ಸರಿ ಮಾಡಿಕೊಳ್ಳುತ್ತಾನ, ಅವನು ಪ್ರೀತಿಸಿದ ಹುಡುಗಿಯಾರಲ್ಲಿ ಯಾರನ್ನು ಮದುವೆಯಾಗುತ್ತಾನೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

ಕೃತ್ವಿಕ್ ತನ್ನ ಮೊದಲ ಚಿತ್ರದಲ್ಲೇ ಕೊಂಚ ವಿಭಿನ್ನ ಎನಿಸುವ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈಗ ನಡೆಯುತ್ತಿರುವ ಟ್ರೆಂಡ್ ಪ್ರಕಾರ ಮೂರು ಚಾಪ್ಟರ್ ಮೂಲಕ ನಾಯಕನ ಲವ್ ಸ್ಟೋರಿಯ ಫ್ಲ್ಯಾಶ್ ಬ್ಯಾಕ್ ನ್ನು ನೀಟ್ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ನಾಯಕನಿಂದ ಹಿಡಿದು ಚಿತ್ರದಲ್ಲಿ ನಟಿಸಿರುವ ಎಲ್ಲರೂ ಹೊಸಬರೇ ಆಗಿರುವುದರಿಂದ ಸಿನಿಮಾದಲ್ಲಿ ತಾಜತನ ಕಾಣುತ್ತದೆ. ಬೇರೆ ಬೇರೆ ವಯೋಮಾನದ ಯುವಕನಾಗಿ ನಟಿಸಿರುವ ಮುಕುಂದ ರಾಮಸ್ವಾಮಿಯ ರಂಗಭೂಮಿ ಹಿನ್ನಲೆ ಇಲ್ಲಿ ಕೈ ಹಿಡಿದಿದೆ. ತೆರೆಯ ಮೇಲೆ ಸ್ಮಾರ್ಟ್ ಆಗಿ ಕಾಣುವ ಮುಕುಂದ, ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.

ಮೇರಿಯಾಗಿ ನಟಿಸಿರುವ ದಿಯಾ ಕೀರ್ತಿ ಮುಗ್ದ ಹುಡುಗಿಯಾಗಿ ಚೆನ್ನಾಗಿ ಅಭಿನಯಿಸಿದ್ದಾರೆ.

ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಂದನ ಗೌಡ ಕೂಡ ಇಷ್ಟ ಆಗುತ್ತಾರೆ. ಉಳಿದಂತೆ ಹಾಡಿನ ಮೂಲಕ ಶ್ವೇತಾ ಕೊಗ್ಲೂರ್ ಗ್ಲಾಮರ್ ನಿಂದ ಗಮನ ಸೆಳೆಯುತ್ತಾರೆ. ರಾಜೇಶ್ ನಟರಂಗ ಮತ್ತು ಸಂಗೀತ ಅನಿಲ್ ನಟನೆ ಚಿತ್ರದ ಹೈಲೈಟ್ಸ್ ಕೂಡ. ಮಂಡ್ಯ ರಮೇಶ್ ತನ್ನ ಶಿಷ್ಯ ಮುಕುಂದ ರಾಮಸ್ವಾಮಿಗೆ ಈ ಸಿನಿಮಾಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಚಿತ್ರದಲ್ಲಿ ಕೂಡ ನಾಯಕನಿಗೆ ಪ್ರೋತ್ಸಾಹ ನೀಡುವ ಪಾತ್ರವನ್ನು ನಿಭಾಯಿಸಿದ್ದಾರೆ.ಹುಲಿ ಕಾರ್ತಿಕ್ ಮತ್ತು ಗ್ಯಾಂಗ್ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡುತ್ತಾರೆ.ಆದರೆ ಚಿತ್ರದಲ್ಲಿ ಇನ್ನಷ್ಟು ಪಂಚ್ ಡೈಲಾಗ್ ಗಳನ್ನು ಬರೆಯುವ ಅವಕಾಶವಿತ್ತು.

ಚಿತ್ರವನ್ನು ನೋಡಿಸಿಕೊಂಡು ಹೋಗುವಲ್ಲಿ ಮತ್ತು ಸಿನಿಮಾವನ್ನು ಮೇಲ್ದರ್ಜೆಗೆ ತೆಗೆದು ಕೊಂಡು ಹೋಗಿರುವುದು ಚಿತ್ರದ ಸಂಗೀತ ನಿರ್ದೇಶಕ ವೀರ್ ಸಮರ್ಥ್! ಎಂದಿನಂತೆ ಹಿನ್ನಲೆ ಸಂಗೀತ ಪ್ರೇಕ್ಷಕರನ್ನು ಎಂಗೇಜಿಂಗ್ ಆಗಿ ಇಡುವಲ್ಲಿ ಅವರು ಇಲ್ಲಿ ಕೂಡ ಸಫಲರಾಗಿದ್ದಾರೆ. ಅರ್ಮಾನ್ ಮಲಿಕ್ ಹಾಡಿರುವ ಹಾಡು ಸೇರಿ ಒಂದೆರಡು ಹಾಡುಗಳು ಚೆನ್ನಾಗಿವೆ. ಪ್ರಮೋದ್ ಮರವಂತೆ,, ಧನಂಜಯ ಅವರ ಕೈಲಿ ಬರೆಸಿರುವ ಹಾಡುಗಳನ್ನು ಕೇಳಿದಾಗ, ನಿರ್ದೇಶಕರಿಗೆ ಒಳ್ಳೆಯ ಅಭಿರುಚಿ ಇದೆ ಅನಿಸುತ್ತದೆ.ಅವಿನಾಶ್ ಶಾಸ್ತ್ರೀ ಛಾ ಯಾಗ್ರಹಣ ಸುಂದರವಾಗಿದೆ.

ಒಟ್ಟಿನಲ್ಲಿ ಲವ್ ಸ್ಟೋರಿಗಳು ಕಡಿಮೆ ಆಗಿರುವ ಈ ಸೀಸನ್ನಲ್ಲಿ ಒಂದು ವಿಭಿನ್ನ ಪ್ರಯತ್ನಕ್ಕೆ ಕೃತ್ವಿಕ್ ಕೈ ಹಾಕಿದ್ದಾರೆ.

support our advertisers
Scroll to Top