ಕೊನೆಗೂ ಟಾಕ್ಸಿಕ್ ಸಿನಿಮಾದ ತಬಾಹಿ ವಿಡಿಯೋ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ಬರೀ ಆಡಿಯೋ ಹಾಡು ಬಿಟ್ಟಾಗ,ಮುಂದೊಂದು ದಿನ ಈ ಹಾಡಿನ ಲಿರಿಕಲ್ ವಿಡಿಯೋ ಬಿಡಬಹುದು ಅಂತ ಊಹೆ ಮಾಡಲಾಗಿತ್ತು. ಆದರೆ ಯಶ್ ಮತ್ತು ಕಿಯಾರ ಅಡ್ವಾಣಿ ನಟಿಸಿರುವ ಹಾಡಿನ ಮದ್ಯೆ ತಾರಾ ಸುತಾರ ಮತ್ತು ನಯನ್ ತಾರಾ ನಟಿಸಿರುವ ಸನ್ನಿವೇಶಗಳನ್ನು ಸೇರಿಸಿ ಸಂಪೂರ್ಣ ವಿಡಿಯೋ ಹಾಡು ಬಿಡುಗಡೆ ಮಾಡಲಾಗಿದೆ

. ಹಾಡು ನೋಡಿದ ವೀಕ್ಷಕರಿಗೆ ಯಶ್ ಮತ್ತು ಕಿಯಾರಾ ಅವರ ಕೆಮೆಸ್ಟ್ರಿ ಇಷ್ಟವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನ ಹಾಡಿನ ಕ್ವಾಲಿಟಿ ಬಗ್ಗೆ ಕೊಂಡಾಡುತ್ತಿದ್ದಾರೆ.ಪ್ರತೀಯೊಂದು ಫ್ರೇಮ್ ನಲ್ಲಿ ಬಳಸಿರುವ ಲೈಟಿಂಗ್ಸ್ ಮತ್ತು ಅದ್ಭುತ ಛಾಯಾಗ್ರಾಹಣದಲ್ಲಿ ಯಶ್ ಮತ್ತು ಕಿಯಾರಾ ತುಂಬಾ ಚೆನ್ನಾಗಿ ಕಾಣಿಸುತ್ತಾರೆ.ಅಲ್ಲಿಗೆ ಗೀತು ಮೋಹನ್ ದಾಸ್ ಮತ್ತು ಅವರ ಪತಿ ಛಾಯಾಗ್ರಾಹಕ ರಾಜೀವ್ ರವಿ ಅವರ ವರ್ಕ್ ಕೆಮೆಸ್ಟ್ರಿ ಕೂಡ ಚೆನ್ನಾಗಿ ವರ್ಕ್ ಔಟ್ ಆಗಿದೆ.

ಹಾಡಿನ ಕ್ವಾಲಿಟಿಯೇ ಹೀಗಿದ್ದರೆ ಇನ್ನೂ ಇಡೀ ಸಿನಿಮಾ ಹೇಗಿರಬಹುದು ಎಂಬ ಊಹೆ ಮಾಡಿ ರಾಕಿ ಬಾಯಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.ಚಿತ್ರದಲ್ಲಿ ರಾಯನ ರೋಮ್ಯಾಂಟಿಕ್ ಸಾಂಗ್ ಬಂದಾಯ್ತು, ಟಿಕೆಟ್ ಗೆ ಏನಾದ್ರು ರುಕ್ಮಿಣಿ ವಸಂತ್ ಜೋಡಿ ಇರಬಹುದ? ಒಂದು ವೇಳೆ ಟಿಕೆಟ್ ಗೆ ಜೋಡಿ ಇದ್ರೆ ಇನ್ನೊಂದು ರೋಮ್ಯಾಂಟಿಕ್ ಸಾಂಗ್ ಹೊರಬಹುದು. ಇಲ್ಲದಿದ್ದರೆ ಬಹುಷಃ ಇಡೀ ಸಿನಿಮಾದಲ್ಲಿ ಇದೊಂದೇ ಲವ್ ಸಾಂಗ್ ಇರಬಹುದು ಎಂದು ಊಹಿಸಲಾಗುತ್ತಿದೆ.

ಒಟ್ಟಿನಲ್ಲಿ ಬಿಡುಗಡೆಗೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಒಂದೊಂದೇ ಕಟೆಂಟ್ ನ್ನು ಚಿತ್ರ ತಂಡ ಬಿಡುಗಡೆ ಮಾಡುತ್ತಿದೆ.ಕೆಲವು ದಿನಗಳ ಹಿಂದೆ ‘ಲೇಡಿಸ್ ಅಂಡ್ ಲೇಡೀಸ್’ ವಿಡಿಯೋ ಮೂಲಕ ಚಿತ್ರದ ಮಹಿಳಾ ಪಾತ್ರದಾರಿಗಳನ್ನು ಪರಿಚಯಿಸಿದ ಚಿತ್ರತಂಡ, ತಬಾಹಿ ಹಾಡಿನ ಮೂಲಕ ಸಿನಿಮಾದ ಬಗ್ಗೆ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.




