ಕೊಮಲ್ ಕುಮಾರ್ ಅಭಿನಯದ ತೆನಾಲಿ ಡಿಎಎಲ್ಎಲ್ಬಿ ಚಿತ್ರಕ್ಕೆ ಚಾಲನೆ, ತಮ್ಮನಿಗೆ ಕರಿಕೋಟು ಗಿಫ್ಟ್ ಕೊಟ್ಟ ಜಗ್ಗೇಶ್
- ರಾಘವೇಂದ್ರ ಅಡಿಗ ಎಚ್ಚೆನ್.
ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ ಜನ ಪ್ರೋತ್ಸಾಹಿಸಬೇಕು ಎಂದು ಹಿರಿಯ ನಟ, ರಾಜ್ಯಸಭಾ ಸಂಸದರಾದ ಜಗ್ಗೇಶ್ ಹೇಳಿದ್ದಾರೆ. ನಟ, ಸೆನ್ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಅವರು ಅಭಿನಯಿಸಿದ “ತೆನಾಲಿ ಡಿಎಎಲ್ ಎಲ್ ಬಿ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಅವರು ಮಾತನಾಡಿದರು. ಆತ ನಿಜ ಜೀವನದಲ್ಲೂ ವಕೀಲಿ ಓದಿಕೊಂಡಿದ್ದಾನೆ, ಆತ ಸಿನಿಮಾರಂಗದ ಕಡೆ ಬರೆದಿದ್ದರೆ ಒಳ್ಳೇ ಲಾಯರ್ ಆಗಿದ್ದ, ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ ಉಳಿಸಬೇಕು, ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಇದಾಗಿದೆ ಎಂದು ತಮ್ಮನ ಸಿನಿಮಾಗೆ ಶುಭ ಹಾರೈಸಿದರು..

ಈ ಹಿಂದೆ ನಮೋ ಭೂತಾತ್ಮ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಯ ಡೀಲ್ ರಾಜಾ, ಕೋಣದಂಥ ವಿಭಿನ್ನ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ನಟ, ಸೆನ್ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಅವರು ಬಹಳ ದಿನಗಳ ನಂತರ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಡಿಎಎಲ್ ಎಲ್ ಬಿ ಚಿತ್ರದ ಮುಹೂರ್ತ ಸಮಾರಂಭ ಗುರುವಾರ ನೆರವೇರಿದೆ. ವಿಜಯನಗರದ ಆದಿಚುಂಚನಗಿರಿ ಮಠದ ಆವರಣದಲ್ಲಿ ಈ ಹೊಸ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಕೋಮಲ್ ಕುಮಾರ್ ಅಭಿನಯದ ತೆನಾಲಿ ಡಿಎಎಲ್ ಎಲ್ ಬಿ ಚಿತ್ರಕ್ಕೆ ಸಹೋದರ, ಹಿರಿಯ ನಟ ಜಗ್ಗೇಶ್ ಅವರು ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಮಹಾಸ್ವಾಮೀಜಿ ಅವರೂ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು ತನಾಲಿ ಡಿಎಎಲ್ಎಲ್ ಬಿ ಚಿತ್ರದ ಟೈಟಲ್ಲೇ ಹೇಳುವ ಹಾಗೆ ನಾಯಕ ಕೋಮಲ್ ಕುಮಾರ್ ಈ ಸಿನಿಮಾದಲ್ಲಿ ಒಬ್ಬ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ದು ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮುರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದೇ ಸಮಯದಲ್ಲಿ ನಟ ಜಗ್ಗೇಶ್ ಅವರು ತಮ್ಮ ಕೋಮಲ್ಗೆ ಕಪ್ಪು ಕೋಟನ್ನು ಗಿಫ್ಟ್ ಆಗಿ ನೀಡಿದರು.
ನಾಯಕನಟ ಕೋಮಲ್ ಕುಮಾರ್ ಮಾತನಾಡಿ, ‘ಲಾಯರ್ ಆಗಬೇಕು ಎನ್ನುವುದು ನನ್ನ ತಂದೆಯ ಕನಸಾಗಿತ್ತು. ಈಗ ನನ್ನ ತಂದೆ ಸಮಾನರಾದ ನಮಗೆ ಕರಿಕೋಟನ್ನು ಕೊಟ್ಟಿದ್ದಾರೆ, ರಿಯಲ್ ಆಗಿ ಆಗದಿದ್ದ ಕೆಲಸವನ್ನು ರೀಲ್ನಲ್ಲಿ ನೆರವೇರಿಸುತ್ತಿದ್ದೇನೆ, ಚಿತ್ರದಲ್ಲಿ ಇದೇ ಕರಿಕೋಟು ಧರಿಸಿ ಆಕ್ಸ್ ಮಾಡುತ್ತಿದ್ದೇನೆ’ ಎಂದು ಹೇಳಿದರು.
ತೆನಾಲಿ ಡಿಎಎಲ್ಎಲ್ಬಿ ಚಿತ್ರದಲ್ಲಿ ಕೋಮಲ್ ಮ ನಾಯಕಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲಬಾರಿಗೆ ಕೋಮಲ್ ಅವರ ಜೊತೆ ನಾಯಕಿಯಾಗಿ ನಟಿಸುತ್ತಿದ್ದೇನೆ, ಪಾತ್ರದ ಬಗ್ಗೆ ಈಗಲೇ ಜಾಸ್ತಿ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇನ್ನು ಈ ಸಿನಿಮಾದಲ್ಲಿ ಮತ್ತೋರ್ವ ನಟಿ ಅಕ್ಷಿತಾ ಬೋಪಯ್ಯ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಸಿದ್ದುವ ಸಿದ್ದು ಸೇರಿದಂತೆ ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ, ರೇಣುಕಾ ಪ್ರಸಾದ್ ಅವರುಗಳು ಬಂಡವಾಳ ಹಾಕಿದ್ದಾರೆ. ರಿತ್ವಿಕ್ ಮುರಳಿಧರನ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಉದಯ್ ಲೀಲಾ ಅವರ ಕ್ಯಾಮೆರಾ ವರ್ಕ್ ತೆನಾಲಿ ಡಿಎಎಲ್ಎಲ್ಬಿ ಚಿತ್ರಕ್ಕಿದೆ.

