ಅಭಿಜಿತ್ ಹಾಡಿನ ಚಿತ್ರೀಕರಣದೊಂದಿಗೆ ‘ಶಿಲ್ಪಾ ಶ್ರೀನಿವಾಸ್ ‘ ಚಿತ್ರೀಕರಣ ಮುಕ್ತಾಯ

ಶಿಲ್ಪಾ ಶ್ರೀನಿವಾಸನಿಗೆ ಕುಂಬಳಕಾಯಿ ಹಾಡಿನೊಂದಿಗೆ ಶೂಟಿಂಗ್ ಮುಗಿಸಿದ ಶಿಲ್ಪಾ ಶ್ರೀನಿವಾಸ್ ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ, ರಾಜೀವ್ ಕೃಷ್ಣ ಅವರ ನಿರ್ದೇಶನದ “ಶಿಲ್ಪಾ ಶ್ರೀನಿವಾಸ್” ಚಿತ್ರದ ಚಿತ್ರೀಕರಣ ಮುಗಿದಿದ್ದು, ಕುಂಬಳಕಾಯಿ ಒಡೆಯಲಾಗಿದೆ. ಬಂಗಾರಪೇಟೆ ತಾಲ್ಲೂಕಿನ ಶ್ರೀ ಶಿವಶನೈಶ್ಚರ ದೇವಾಲಯದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ಅಭಿನಯದ “ದೇವರು ಸೃಷ್ಠಿಸೋ ಸಿನಿಮಾದಲ್ಲಿ ನಾವೆಲ್ಲಾ ಪಾತ್ರದಾರಿಗಳು”,ಎಂಬ ಹಾಡಿನ ಚಿತ್ರೀಕರಣದೊಂದಿಗೆ ಕುಂಬಳಕಾಯಿ ಒಡೆಯಲಾಯಿತು.

ಹಾರರ್, ಸಸ್ಪೆನ್ಸ್ , ಥ್ರಿಲ್ಲರ್ ಜಾನರ್ ಕಥಾಹಂದರ ಒಳಗೊಂಡ ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಅಭಿಜಿತ್, ಶಿಲ್ಪಾ ಶ್ರೀನಿವಾಸ್, ಶೋಭರಾಜ್, ನಾಗೇಂದ್ರ ಅರಸ್, ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಪ್ರಿಯಾ,ಪಂಚಾಕ್ಷರಯ್ಯ.ಮರಿಸ್ವಾಮಿ, ಅಮೃತ ಕಾಳೆ,ಶಂಖನಾದ ಆಂಜಿನಪ್ಪ, ಮಾಸ್ಟರ್ ವೀರ ಧನುಷ್, ಅನ್ನಪೂರ್ಣ, ನಂದಿನಿ ಕಮ್ಮಯ್ಯ, ಧನ್ಯ ಭೂಮಿಕಾಶ್ರೀ, ಬೇಬಿ ಶಾರಿಕಾ ಕಾರ್ತೀಕ್ ಮೊದಲಾದವರು ನಟಿಸಿದ್ದಾರೆ.

ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಾಹಸ ಮತ್ತು ನೃತ್ಯ ನಿರ್ದೇಶನದ ಜವಾಬ್ದಾರಿಯನ್ನೂ ಸಹ ನಿಭಾಯಿಸಿದ್ದಾರೆ

.

ಪ್ರಮೋದ್ ಅವರ ಛಾಯಾಗ್ರಹಣ, ಡಿ. ಮಲ್ಲಿ ಅವರ ಸಂಕಲನ, ಅನಿರುದ್ಧ ಶಾಸ್ತ್ರಿ ಅವರ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಪ್ರವೀಣ್ ಭದ್ರಾವತಿ ಹಾಗು ಮಲ್ಲಿ ಕೆ. ವಡ್ಡರಹಟ್ಟಿ ಸಹ ನಿರ್ದೇಶನ ಇರುವ ಶಿಲ್ಪಾ ಶ್ರೀನಿವಾಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಮೇ ತಿಂಗಳ ಮೊದಲ ವಾರ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿದೆ.

support our advertisers
Scroll to Top