ಈ ವಾರ ರಾಣಿ ಮುಖರ್ಜಿ ಮತ್ತು ಶಾಹಿದ್ ಕಪೂರ್ ಚಿತ್ರಗಳ ಬಿಡುಗಡೆ

ಪ್ರತೀ ವಾರದಂತೆ ಈ ವಾರ ಕೂಡ ಅಂದರೆ ಮಾರ್ಚ್ 27 ರಂದು ಒ ಟಿ ಟಿ ಯಲ್ಲಿ ಒಂದಷ್ಟು ಚಿತ್ರಗಳು ಬಿಡುಗಡೆಯಾಗಿವೆ . ಈ ವಾರ ಕನ್ನಡದ ಯಾವುದೇ ಚಿತ್ರ ಕೂಡ ಬಿಡುಗಡೆಯಾಗದಿದ್ದರೂ, ಎರಡು ಪ್ರಮುಖ ಹಿಂದಿ ಚಿತ್ರಗಳು ಬಿಡುಗಡೆಯಾಗಿವೆ.

ರಾಣಿ ಮುಖರ್ಜಿಯ ಪ್ರಮುಖ ಪ್ರಾಂಚೈಸಿ ಚಿತ್ರ ಮರ್ದಾನಿ 3 ಈ ವಾರ ಬಿಡುಗಡೆಯಾಗಿದೆ. ರಾಣಿ ಮುಖರ್ಜಿ ಕಡಕ್ ಪೊಲೀಸ್ ಅಧಿಕಾರಿಣಿಯಾಗಿ ನಟಿಸಿದ ಮರ್ದಾನಿ ಭಾಗ ಒಂದು ಮತ್ತು ಎರಡು ಚಿತ್ರಗಳು ಹಿಟ್ ಆಗಿತ್ತು.

ರಾಣಿ ಮುಖರ್ಜಿ ಪತಿ ಆದಿತ್ಯ ಚೋಪ್ರ ತಮ್ಮ ಯಶ್ ರಾಜ್ ಬ್ಯಾನರ್ ನಡಿಯಲ್ಲಿ ನಿರ್ಮಿಸಲಾದ ಮರ್ದಾನಿ 3 ಬಾಕ್ಸ್ ಆಫೀಸ್ ನಲ್ಲಿ ಅಂತಹ ಗಳಿಕೆ ಕಂಡಿರಲಿಲ್ಲ. ಆದರೆ ಈ ಹಿಂದಿನ ಎರಡು ಚಿತ್ರಗಳನ್ನು ನೋಡಿದ ಪ್ರೇಕ್ಷಕರಿಗೆ ಈ ಚಿತ್ರ ನಿರಾಶೆ ಉಂಟು ಮಾಡುವುದಿಲ್ಲ. ಈ ಚಿತ್ರ ಈಗ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಈ ವಾರ ಬಿಡುಗಡೆಯಾದ ಇನ್ನೊಂದು ಪ್ರಮುಖ ಚಿತ್ರವೆಂದರೆ ಮ್ಯಾಚಿಸ್ ಖ್ಯಾತಿಯ ವಿಶಾಲ್ ಭಾರದ್ವಾಜ್ ನಿರ್ದೇಶನ ಮಾಡಿರುವ ‘ಒ ರೋಮಿಯೋ ಅನ್ನುವ ಚಿತ್ರ . ಈ ಚಿತ್ರಕ್ಕೆ ಕೂಡ ಥಿಯೇಟರ್ ನಲ್ಲಿ ಅಂತಹ ಮನ್ನಣೆ ಸಿಕ್ಕಿರಲಿಲ್ಲ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಾನಾ ಪಾಟೇಕರ್ ತಮನ್ನಾ ಬಾಟಿಯ ತ್ರಿಪ್ತಿ ದಿಮ್ರಿ ಫರಿದ ಜಲಾಲ್, ದಿಶಾ ಪಠಾಣಿ ಮುಂತಾದವರಿದ್ದಾರೆ.ಸದ್ಯಕ್ಕೆ ಈ ಚಿತ್ರವನ್ನು ಆಮೇಜಾನ್ ಪ್ರೈಮ್ ನಲ್ಲಿ ಸಬ್ಸ್ಕ್ರೈಬ್ ಮಾಡಿ ವೀಕ್ಷಿಸಬಹುದು.

ಉಳಿದಂತೆ BTS the return ಹೆಸರಿನ ಡಾಕ್ಯುಮೆಂಟರಿ ನೆಟ್ ಫ್ಲಿಕ್ಸ್ ನಲ್ಲಿ ಬಂದಿದೆ. ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರ ಮುತ್ತು ಅಲಿಯಾಸ್ ಕಟ್ಟನ್ ಜಿಯೋ ಹಾಟ್ ಸ್ಟಾರ್ ನಲ್ಲಿ ಬಂದಿದ್ದು,Something Very Bad Is Going to Happen ಎಂಬ ಆಂಗ್ಲ ಭಾಷೆಯ ಸೈಕಾಲಜಿಕಲ್ ಹೋರರ್ ಥ್ರಿಲ್ಲರ್ ಸೀರೀಸ್ ಈ ತಿಂಗಳ 26 ರಿಂದ ನೆಟ್ ಫ್ಲಿಕ್ಸ್ ಸ್ತ್ರೀಮ್ ಆಗುತ್ತಿದೆ.

support our advertisers
Scroll to Top