ಕ್ರಿಕೆಟಿಗ ಶ್ರೇಯಸ್ ಐಯರ್-ನಿಮಿಕಾ ರತ್ನಾಕರ್ ಭೇಟಿ!

ಸಿನಿಮಾ ನಟಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವ ನಿಮಿಕಾ ರತ್ನಾಕರ್, ನಟನೆಯ ನಡುವೆಯೇ ಮತ್ತೊಂದಷ್ಟು ಕ್ರಿಯಾಶೀಲ ಪಥದಲ್ಲಿ ತೊಡಗಿಸಿಕೊಂಡಿರುವವರು. ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ನೇಹ ವಲಯ ಹೊಂದಿರುವ ನಿಮಿಕಾ, ಇತ್ತೀಚೆಗೆ ನಡೆದ ಕ್ರಿಕೆಟರ್ ಪೃಥ್ವಿ ಶಾ ಅವರ ಎಂಗೇಜ್ಮೆಂಟ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಖ್ಯಾತ ಕ್ರಿಕೆಟ್ ಪಟು ಶ್ರೇಯಸ್ ಅಯ್ಯರ್ ಅವರನ್ನು ಭೇಟಿಯಾಗಿದ್ದಾರೆ.

ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಸಮಾರಂಭ ಕಳೆದ ಭಾನುವಾರ ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭಕ್ಕೆ ನಿಮಿಕಾ ರತ್ನಾಕರ್ ತಮ್ಮ ಕುಟುಂಬ ಸಮೇತರಾಗಿ ಹಾಜರಾಗಿದ್ದರು. ಈ ಸಮಾರಂಭಕ್ಕೆ ಶ್ರೇಯಸ್ ಅಯ್ಯರ್ ಕೂಡಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶ್ರೇಯಸ್ ಮತ್ತು ನಿಮಿಕಾ ಅಚಾನಕ್ಕಾಗಿ ಭೇಟಿಯಾಗಿ ಸಂಭ್ರಮಿಸಿದ್ದಾರೆ. ನಿಮಿಕಾ ರತ್ನಾಕರ್ ಕ್ರಿಕೆಟ್ ಪ್ರೇಮಿಯೂ ಹೌದು. ಕಳೆದ ಬಾರಿ ಆರ್‌ಸಿಬಿ ಫೈನಲ್ ಪಂದ್ಯಾಟ ನಡೆದಾಗ ಅಹಮದಾಬಾದ್‌ಗೆ ತೆರಳಿ ಗೆಲುವಿನ ಖುಷಿಯಲ್ಲಿ ಭಾಗಿಯಾಗಿದ್ದರು. ಈ ಕಾರಣದಿಂದಲೇ ಕ್ರಿಕೆಟ್ ಜಗತ್ತಿನ ಜೊತೆ ನಿಮಿಕಾರಿಗೆ ಅನ್ಯೋನ್ಯ ಬಂಧವಿದೆ.

support our advertisers
Scroll to Top