‘ಬೇಲ್’ MOVIE REVIEW: ಸಿಂಪಲ್ ಆಗಿರೋ ಸೂಪರ್ ಹೀರೋ ಕಥೆ

ಚಿತ್ರ: ಬೇಲ್
ನಿರ್ದೇಶನ: ಪವನ್ ಒಡೆಯರ್
ನಿರ್ಮಾಣ: ಕೆವಿನ್ ಪ್ರೊಡಕ್ಷನ್ಸ್
ತಾರಾಗಣ: ಶಿವರಾಜ್​ಕುಮಾರ್, ಸಾಯಿ ಕುಮಾರ್, ಜಯರಾಮ್, ರಮೇಶ್. ಇಂದಿರಾ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ಲೂದ್ ಮಾದ ಯೋಗಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು
ರೇಟಿಂಗ್: 3.5/5 ****

ನಿವೃತ್ತ ಐಪಿಎಸ್‌ ಅಧಿಕಾರಿ ವಿಜಯ್ ಕುಮಾರ್ (ಶಿವರಾಜ್ ಕುಮಾರ್)ತನ್ನ ವೃತ್ತಿ ಜೀವನದಲ್ಲಿ ಒಂದೇ ಒಂದು ಗಾಯವನ್ನೂ ಮಾಡಿಕೊಳ್ಳದೆ ರಿಟೈರ್‌ ಆದವನು ಪೊಲೀಸ್ ಕಮಿಷನರ್‌ ವಿಜಯ್ ಕುಮಾರ್. ಪಬ್ಲಿಕ್ ಲೈಫ್‌ನಲ್ಲಿ ಅಮ್ಮಾವ್ರ ಗಂಡ, ಮಿನಿಸ್ಟರ್ ಮಾವನಿಂದ ಪೋಸ್ಟ್ ಗಿಟ್ಟಿಸಿಕೊಂಡವನು ಎಂಬ ಹೀಯಾಳಿಕೆ ಅವನ ಕುರಿತು ಆಗಾಗ ಕೇಳಿ ಬರುತ್ತದೆ. ಆದರೆ ಇಂತಹ ವಿಜಯ್ ಕುಮಾರ್ ನಿವೃತ್ತಿ ನಂತರ ಹೇಗೆಲ್ಲಾ ದುಷ್ಟ ಸಂಹಾರ ಮಾಡುತ್ತಾನೆ ಎನ್ನುವುದೇ “ಬೇಲ್” ಚಿತ್ರದ ಕಥೆ. ಇನ್ನೂ ಹೇಳಬೇಕೆಂದರೆ ಕಾನೂನಿನಲ್ಲಿ ಇರುವ ಲೋಪಗಳನ್ನು ದುರ್ಬಳಕೆ ಮಾಡಿಕೊಂಡು ಅಪರಾಧಿಗಳು ಯಾವ ರೀತಿ ಬಚಾವ್ ಆಗುತ್ತಾರೆ ಮತ್ತು ಅಂಥವರಿಗೆ ವಿಜಯ್ ಕುಮಾರ್ ಯಾವ ರೀತಿ ಶಿಕ್ಷೆ ನೀಡುತ್ತಾನೆ ಎಂಬುದೇ ಈ ಸಿನಿಮಾದ ಕಥಾಹಂದರ.


ನಟ ಶಿವರಾಜ್​ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಅವರ ಕಾಂಬಿನೇಷನ್​ನಲ್ಲಿ ‘ಬೇಲ್’ ಸಿನಿಮಾ ಮೂಡಿಬಂದಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಈ ಚಿತ್ರದ ಮೂಲಕ ಪವನ್ ಒಡೆಯರ್ ನಿರ್ದೇಶಕರಾಗಿ ಕಂ ಬ್ಯಾಕ್ ಆಗಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಮಿಂಚಿದ್ದಾರೆ. ಅವರಿಗೆ ಸಾಯಿಕುಮಾರ್ ಹಾಗೂ ಜಯರಾಂ ಸಾಥ್ ನೀಡಿದ್ದಾರೆ. ಚಿತ್ರದ ಬಹುತೇಕ ಕಥೆ ಇದೇ ಮೂವರಿಂದ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಬರುವ ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಲೂಸ್ ಮಾದ ಯೋಗಿ ಅವರ ಪಾತ್ರ ಈ ಮೂವರಿಗೆ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತದೆ.


ಯೋಗಿ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ತಮಗೆ ಸಿಕ್ಕ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಅವರು ಮಾಡಿರುವ ಪತ್ರಕರ್ತನ ಪಾತ್ರಕ್ಕೆ ಕಥೆಯಲ್ಲಿ ಮಹತ್ವ ಇದೆ. ಬಹುವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ ಸಂಗೀತಾ ಶಿವರಾಜ್ ಕುಮಾರ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಕ್ಷಿತ್ ಶೆಟ್ಟಿ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಸಂಜನಾ ಆನಂದ್ ಪಾತ್ರಕ್ಕೆ ಒಂದು ಹಾಡಿನ ಹೊರತಾಗಿ ಹೆಚ್ಚು ಸ್ಕೋಪ್ ಸಿಕ್ಕಿಲ್ಲ.
ಹಾಡಿನ ಕುರಿತು ಹೇಳುವುದಾದರೆ ನಿವೇದಿತಾ, ಜಗ್ಗಪ್ಪ ಅಭಿನಯದ “ಕುಮಾರಿ” ಹಾಡು ಚೆನ್ನಾಗಿ ಬಂದಿದೆ. “ಚೆಲುವೆ ಚೆಲುವೆ” ಹಾಡು ಕಥೆ ಓಟಕ್ಕೆ ಅಡ್ಡಿ ಎನಿಸಬಹುದು .ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ವೈದಿ ಎಸ್. ಅವರ ಛಾಯಾಗ್ರಹಣ, ಶಶಾಂಕ್ ನಾರಾಯಣ್ ಸಂಕಲನ, ಚಿತ್ರದ ಪ್ಲಸ್ ಪಾಯಿಂಟ್.
ಒಟ್ಟಿನಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಇದು ಹೇಳಿ ಮಾಡಿಸಿದ ಸಿನಿಮಾ. ತಮ್ಮ ನೆಚ್ಚಿನ ನಟನನ್ನು ಹೊಸ ರೂಪದಲ್ಲಿ ನೋಡಲು ಖಂಡಿತಾ ಇಷ್ಟ ಆಗುತ್ತೆ. ಇದಲ್ಲದೆ ಲಾಜಿಕ್ ಕಡೆಗೆ ಜಾಸ್ತಿ ಗಮನ ಕೊಡದೆ ಸಿಂಪಲ್ ಆಗಿರುವ ಸೂಪರ್ ಹೀರೋ ಕಥೆಯನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಬಯಸುವವರಿಗೆ ಈ ಚಿತ್ರ ಉತ್ತಮ ಆಯ್ಕೆ ಆಗಿದೆ.

support our advertisers
Scroll to Top