ಚಿತ್ರ: ಭಾವಾಂತರ
ನಿರ್ಮಾಣ: ಕಾರ್ತಿಕ್ ಶರ್ಮಾ
ನಿರ್ದೇಶನ: ಕಾಂತ್ರಿಕ್ ಶರ್ಮಾ
ತಾರಾಂಗಣ: ಕಾರ್ತಿಕ್ ಶರ್ಮಾ, ತನ್ವಿ ರಾವ್, ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದಾ ರಾವ್ ಮೊದಲಾದವರು
ರೇಟಿಂಗ್: 3/5 ****

ರಾಧಾ ಎನ್ನುವ ಓರ್ವ ಯುವತಿ ತಾನು ಇಷ್ಟಪಟ್ಟ ಮಾಧವ ಎನ್ನುವ ಹುಡುಗ ಹುಡುಗಿಯಾಗಿ ಬದಲಾದರೆ ಅದರಿಂದ ಅವಳ ಮೇಲಾಗುವ ಪರಿಣಾಮ ಏನು? ಎನ್ನುವುದೇ “ಭಾವಾಂತರ” ಚಿತ್ರದ ಒನ್ ಲೈನ್ ಸ್ಟೋರಿ. ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಭಾವಾಂತರ” ಸಿನಿಮಾ ಇಂದು ಬಿಡುಗಡೆ ಆಗಿದೆ. ಒಂದು ಪ್ರೇಮ ಕಥೆಯ ಜೊತೆಗೆ ಮಂಗಳಮುಖಿಯರ ಬದುಕಿನ ಹೋರಾಟವನ್ನೂ ಸಹ ಈ ಚಿತ್ರದಲ್ಲಿ ಸೂಕ್ಷ್ಮವಾಗಿ ಕಟ್ಟಿ ಕೊಡಲಾಗಿದೆ.
ತಮಿಳುನಾಡಿನ ಊರೊಂದರಲ್ಲಿ ನಡೆಯುವ ಮಂಗಳಮುಖಿಯರ ಮೂರು ದಿನಗಳ ವಿಶೇಷ ಹಬ್ಬದ ಆಚರಣೆಯೇ ಚಿತ್ರದ ಪ್ರಧಾನ ಕೇಂದ್ರಬಿಂದು. ಈ ಚಿತ್ರದಲ್ಲಿ ಕಿರುತೆರೆಯಲ್ಲಿ ಜನಪ್ರಿಯವಾಗಿರುವ ನಟಿ ತನ್ವಿ ರಾವ್ ರಾಧಾ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಸಿನಿಮಾದಲ್ಲಿ ಸಾಕಷ್ಟು ದೊಡ್ಡ ಸ್ಕೋಪ್ ಇದೆ. ಇದರ ಹೊರತಾಗಿ ಮಾಧವ ಪಾತ್ರದಲ್ಲಿ ಸ್ವತಃ ನಿರ್ದೇಶಕನಾಗಿರುವ ಕಾರ್ತಿಕ್ ಶರ್ಮಾ ಕಾಣಿಸಿಕೊಂಡೊದ್ದಾರೆ. ಇನ್ನುಳಿದಂತೆ ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದಾ ರಾವ್ ಅಭಿನಯ ಕಥೆಗೆ ಪುರಕವಾಗಿದೆ.
ಚಿತ್ರಕ್ಕೆ ಕಾರ್ತಿಕ್ ಶರ್ಮಾ ನಾಯಕರೂ ಆಗಿದ್ದಾರೆ. ಕಥೆ ಚಿತ್ರಕಥೆ ನಿರ್ದೇಶನ ಇವರೇ ಮಾಡಿದ್ದಾರೆ. ಮ್ಯೂಸಿಕ್ ಡೈರೆಕ್ಷನ್ ಕೂಡ ಇವರದ್ದೇ ಚಿತ್ರಕ್ಕೆ ಬಂಡವಾಳ ಸಹ ತೊಡಗಿಸಿದ್ದಾರೆ. ಚಿತ್ರ ತಂಡ ಈ ಸಿನಿಮಾದ ಕಥೆ ಮೇಲೆ, ಸಿನಿಮಾ ಮೇಕಿಂಗ್ ಮೇಲೆ ಸಾಕಷ್ಟು ಕೆಲಸ ಮಾಡಿರುವುದು ತೆರೆ ಮೇಲೆ ಕಾಣಿಸಿದೆ.
ತಮಿಳುನಾಡಿನ ಕೂವಗಂ ಅಲ್ಲಿ ನಡೆಯುವ ಮಂಗಳಮುಖಿಯರ ಉತ್ಸವ ವಿಶ್ವದ ಅತಿದೊಡ್ಡ ಉತ್ಸವ ಎನಿಸಿಕೊಂಡಿದೆ, ಈ ಉತ್ಸವದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಇಲ್ಲಿವರೆಗೂ ಯಾರೂ ಹೇಳಿರದ ಕಥೆಯನ್ನೆ ಹೇಳಲಾಗಿದ್ದು ಹೊಸ ಬಗೆಯ ಕಥೆ ಇಷ್ಟಪಡುವವರಿಗೆ ಈ ವಾರ “ಭಾವಾಂತರ” ಉತ್ತಮ ಆಯ್ಜೆ ಆಗಲಿದೆ.

