ಇದು ಮಿಸ್ ಮ್ಯಾಚ್ ಆದವರ ಪ್ರೀತಿಯ ಕಥೆ, ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ ಚಿತ್ರ ಜ.8 ಕ್ಕೆ ತೆರೆಗೆ

ಪ್ರೀತಿ ಮೊಳೆಯುವ ಸುಂದರ ಕ್ಷಣಗಳನ್ನು ಮಧುರವಾಗಿ ಕಟ್ಟಿಕೊಡುವ ಇಂದಿನ ಪೀಳಿಗೆಯ ಮನಸ್ಸಿಗೆ ಹತ್ತಿರವಾಗುವ ಕಥೆಯೊಂದಿಗೆ ತೇಜಸ್ ಪಬ್ಲಿಕೇಷನ್ಸ್ ಹೊಸದಾಗಿ ಆರಂಭಿಸಿರುವ ಸಂಗೀತ ಮುದ್ರಿಕೆಯ ಮೊದಲ ಸಿನಿಮಾ ‘ಮಿಸ್ ಮ್ಯಾಚ್’ ಚಿತ್ರದ ಮೊದಲ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆದಿದೆ. ಯುವ ಪ್ರತಿಭಾನ್ವಿತ ಕಲಾವಿದರ ತಂಡ ಸೇರಿಕೊಂಡು ನಿರ್ಮಿಸಿ,‌ ನಿರ್ದೇಶಿಸಿರುವ ಚಿತ್ರದ ಟೀಸರ್ ಸಹ ಬಿಡುಗಡೆ ಆಗಿದೆ. ಹಾಗೆಯೇ ಮುಂದಿನ ವರ್ಷ ಜನವರಿ .8 ಕ್ಕೆ ಮೇಘಾ ಮತ್ತು ಅಕಾಶ್ ನಡುವಿನ ಕಥೆಯನ್ನು ತೆರೆಯ ಮೇಲೆ ನೊಡಬಹುದಾಗಿದೆ.
ಸಿನಿಮಾದ ಚಿತ್ರೀಕರಣ ಇದಾಗಲೇ ಮುಗಿದಿದ್ದು ಚಿತ್ರಕ್ಕೆ ನಿರ್ದೇಶಕ ಸಾಯಿ ಶ್ರೀನಿಧಿ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕ ತೇಜೇಶ್ ವೆಂಕಟೇಶ್ ಚಿತ್ರದ ನಿರ್ಮಾಣ ಮಾಡಿದ್ದಾರೆ.


” ಬಿಟಿಎಸ್ ಚಿತ್ರ ಬಿಡುಗಡೆಯಾದ ಎರಡು ವರ್ಷಗಳ ನಂತರ ‌ಮಿಸ್ ಮ್ಯಾಚ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಪ್ರೀತಿ, ಪ್ರೇಮದ ಸಂಬಂದ ಕೊಡು ಕೊಳ್ಳುವಿಕೆಯ ರೀತಿ ಆಗಿದೆ. ಮುಗ್ದತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರೀತಿ, ದ್ವೇಷ, ಅಸೂಯೆ ಎಲ್ಲವೂ ಇದೆ. ಎಲ್ಲವೂ ನ್ಯಾಚುರಲ್ ಆಗಿ ಮೂಡಿಬಂದಿದೆ. ಚಿತ್ರದಲ್ಲಿ ಐದು ಹಾಡುಗಳಿವೆ. ನಾಲ್ಕು ಬಿಟ್ ಟ್ರಾಕ್ ಇದೆ. ಮ್ಯೂಸಿಕಲ್‌ ರೋಮಾಂಟಿಕ್ ಕಾಮಿಡಿ ಚಿತ್ರ.” ಎನ್ನುವುದಾಗಿ ನಿರ್ದೇಶಕ ಸಾಯಿ ಶ್ರೀನಿಧಿ ಹೇಳಿದ್ದಾರೆ.
” ಐಟಿ, ಮತ್ತು ಎಐ ನಲ್ಲಿ ಕೆಲಸ ಮಾಡುತ್ತಿದ್ದು ಕೆಲಸಕ್ಕೆ‌ ವಿರಾಮ‌ ತೆಗೆದುಕೊಂಡು ಸಿನಿಮಾ ನಿರ್ಮಾಣ ಮಾಡಿದ್ದೇನೆ. ರೋಮಾಂಟಿಕ್ ಕಾಮಿಡಿ ಚಿತ್ರವನ್ನು ನಮ್ಮದೇ ಆಡಿಯೋ ಸಂಸ್ಥೆ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ, ಚಿತ್ರಕ್ಕೆ ‌ಎಲ್ಲರ ಸಹಕಾರವಿರಲಿ” ಎಂದು ಚಿತ್ರದ ನಿರ್ಮಾಪಕ ತೇಜೇಶ್ ವೆಂಕಟೇಶ್ ಮನವಿ ಮಾಡಿದರು.
ನಟ ಕೌಶಿಕ್ ಗೌಡ, ನಟ ತೇಜೇಶ್ ಎಸ್. ಎಂ , ನಾಯಕಿ ಅಶ್ವಿತಾ ಹೆಗ್ಡೆ ಹಾಗೂ ಅಮೃತಾ ಕೆ ಪಿ ಸೇರಿದಂತೆ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು. ಚಿತ್ರದಲ್ಲಿ ನಾಗೇಂದ್ರ ಶಾ, ಲಕ್ಷ್ಮಿ ಸಿದ್ದಯ್ಯ, ಅನಿರುದ್ದ್ ಆಚಾರ್ಯ ಅನೂಪ್ ಮತ್ತಿತರರು ಕಾಣಿಸಿಕೊಂಡಿದ್ದಾರೆ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು ಗಣೇಶ್ ಬಹಾಬಲ ಛಾಯಾಗ್ರಹಣವಿದೆ.

support our advertisers
Scroll to Top