ಕೊನೆಗೂ ಒ ಟಿ ಟಿ ಯಲ್ಲಿ ಅಬ್ಬರಿಸಲು ಬಂದ ಡೆವಿಲ್

ಇತ್ತೀಚೆಗೆ ಸಾಮಾನ್ಯವಾಗಿ ಯಾವುದೇ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾದರೂ ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಒ ಟಿ ಟಿ ಗೆ ಲಗ್ಗೆ ಇಡುತ್ತದೆ. ಹೆಚ್ಚಿನ ಸಿನಿಮಾಗಳ ನಿರ್ಮಾಪಕರು ಈ ರೀತಿಯ ಒಪ್ಪಂದವನ್ನು ಒ ಟಿ ಟಿ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುತ್ತಾರೆ. ಚಿತ್ರಮಂದಿರದಲ್ಲಿ ಸಿನಿಮಾ ಚೆನ್ನಾಗಿ ಓದುತ್ತಿದ್ದರೂ ಕೂಡ ಒಪ್ಪಂದದ ಪ್ರಕಾರ ಒಟಿಟಿ ಯಲ್ಲಿ ಬೇಗ ಬಿಡುಗಡೆಯಾಗುತ್ತಿದೆ.

ಆದರೆ ದರ್ಶನ್ ನಟನೆಯ ‘ ಡೆವಿಲ್’ ಕಳೆದ ವರ್ಷ ಡಿಸೆಂಬರ್ 11ರಂದು ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ಕೂಡ ಓಟಿಟಿಗೆ ಬಂದಿರಲಿಲ್ಲ. ಸಿನಿಮಾ ಹೆಚ್ಚು ಕಡಿಮೆ 40 ಕೋಟಿಯಷ್ಟು ಕಲೆಕ್ಷನ್ ಮಾಡಿ ಥಿಯೇಟರ್ ನಲ್ಲಿ ಎರಡನೇ ಸಾರಿ ಬಿಡುಗಡೆಯಾಗಿ ಒಂದಷ್ಟು ದರ್ಶನ್ ಫ್ಯಾನ್ಸ್ ತನ್ನ ನೆಚ್ಚಿನ ನಾಯಕ ಜೈಲಿನಲ್ಲಿದ್ದರೂ ಕೂಡ ಚಿತ್ರವನ್ನು ಒಂದು ಮಟ್ಟಿಗೆ ದಡ ಸೇರಿಸುವ ಪ್ರಯತ್ನ ಮಾಡಿದ್ದರು.

‘ಮಿಲನ’ ಖ್ಯಾತಿಯ ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶಿಸಿದ್ದ ಈ ಚಿತ್ರ, ಇಂದಿನಿಂದ ಜೀ 5 ಲ್ಲಿ ಲಭ್ಯವಿದೆ. ದರ್ಶನ್ ಎರಡು ಶೇಡಿನಲ್ಲಿ ಕಾಣಿಸಿಕೊಂಡಿದ್ದು,ಈ ಚಿತ್ರದ ನೆಗೆಟಿವ್ ಪಾತ್ರದ ಮೂಲಕ ದರ್ಶನ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದರು.ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಏನೋ ಒಂತರ ‘ಹಾಗೂ ‘ನಿನದೇನೇ ಜಪವು ಕೃಷ್ಣ’ ಹಾಡುಗಳು ಜನಪ್ರಿಯವಾಗಿದ್ದು, ಈಗಾಗಲೇ ಚಿತ್ರವನ್ನು ಬೆಳಿತರೆಯಲ್ಲಿ ನೋಡಲು ಮಿಸ್ ಮಾಡಿಕೊಂಡಿರುವ ಪ್ರೇಕ್ಷಕರು ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಚಿತ್ರವಾಗಿದೆ.

ಜಿಯೋ ಹಾಟ್ ಸ್ಟಾರ್ ಗೆ ಬಂದ ಮಾ ಇಂಟಿ ಬಂಗಾರಂ ‘

ಇತ್ತೀಚಿನ ಕೆಲವು ದಿನಗಳ ಹಿಂದೆ ಸಮಂತಾ ಪ್ರಭು ನಟಿಸಿರುವ ನಾಯಕಿ ಪ್ರಧಾನ ಚಿತ್ರ ‘ಮಾ ಇಂಟಿ ಬಂಗಾರಮು’ ದಕ್ಷಿಣದಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಮಹಿಳಾ ಪ್ರಧಾನವಾದ ಈ ಚಿತ್ರ ಕೆಲವು ದಿನಗಳ ಹಿಂದೆಯಷ್ಟೇ 100 ಕೋಟಿ ಕ್ಲಬ್ ಗೆ ಸೇರ್ಪಡೆಯಾಗಿತ್ತು.

ನಮ್ಮ ಕನ್ನಡದ ದಿಗಂತ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಕಾಂತಾರ ಚಾಪ್ಟರ್ 1 ಖ್ಯಾತಿಯ ಗುಲ್ಶನ್ ದೇವಯ್ಯ ಕೂಡ ಕೂಡ ಅಭಿನಯಿಸಿದ್ದರು.

ಸಿನಿಮಾ ನೋಡಿದ ಪ್ರೇಕ್ಷಕರು ಸಮಂತಾ ಅವರ ಪವರ್ ಫುಲ್ ಪರ್ಫಾರ್ಮೆನ್ಸ್ ಗೆ ಫಿದಾ ಆಗಿದ್ದು ಇಡೀ ಚಿತ್ರವನ್ನು, ಆಕೆ ತನ್ನ ಹೆಗಲ ಮೇಲೆ ಹೊತ್ತು ಸಿನಿಮಾದ ಸಕ್ಸಸ್ ಗೆ ಕಾರಣವಾಗಿದ್ದರು.ಈ ಚಿತ್ರವನ್ನು ಆಕೆಯ ಅಭಿನಯಕ್ಕಾಗಿ ಆಕೆಯ ಅಭಿಮಾನಿಗಳೆಲ್ಲರೂ ನೋಡಿ ಎಂಜಾಯ್ ಮಾಡಬಹುದು.

support our advertisers
Scroll to Top