ರಾವಣನ ರಣಾರ್ಭಟ.. vs ರಾಮನ ಪರಾಕ್ರಮ..! ಬ್ರಾಹ್ಮೀ ಮುಹೂರ್ತದಲ್ಲಿ ರಾಮಾಯಣ ಟ್ರೇಲರ್​ ಔಟ್​ |

ಬಾಲಿವುಡ್‌ ಬೆಳ್ಳಿತೆರೆಯಲ್ಲಿ ಕನ್ನಡದ ಹುಡುಗನ ವೀರಪ್ರತಾಪ!!

ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೇಲರ್ ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ರಾವಣನ ಪಾತ್ರದಲ್ಲಿ ಕನ್ನಡಿಗರ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಿದ್ದು, ಅವರ ಮಾಸ್ ಹಾಗೂ ಗಂಭೀರ ಲುಕ್ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದೆ. ಇನ್ನು ಶ್ರೀರಾಮ ಮತ್ತು ಸೀತೆಯ ನಯನ ಮನೋಹರ ರೂಪಗಳು ಮತ್ತು ದೃಶ್ಯ ವೈಭವ ವೀಕ್ಷಕರ ಕಣ್ಣುತುಂಬಿಸುವಂತಿದೆ. ಬೃಹತ್ ಬಜೆಟ್ ಹಾಗೂ ಅತ್ಯಾಧುನಿಕ ವಿಎಫ್‌ಎಕ್ಸ್ (VFX) ತಂತ್ರಜ್ಞಾನದೊಂದಿಗೆ ಮೂಡಿಬಂದಿರುವ ಈ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.


“ಮೂರು ಲೋಕಕ್ಕೆ ನಾನೇ ರಾಜ ರಾಮಾಯಣ ಟ್ರೈಲರ್ ನಲ್ಲಿ ಅಸುರ ಚಕ್ರವರ್ತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಆರ್ಭಟ”
ವಿಶ್ವದ ಅತ್ಯಂತ ಪುರಾತನ ಮತ್ತು ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ಆಧರಿಸಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಎರಡು ಭಾಗಗಳ ಬೃಹತ್ ಸಿನಿಮ್ಯಾಟಿಕ್ ದೃಶ್ಯಕಾವ್ಯವಾಗಿ ಇದನ್ನು ನಿರ್ಮಿಸುತ್ತಿದ್ದಾರೆ. ಸೃಷ್ಟಿಯ ಆರಂಭದಿಂದಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಮೂರು ಲೋಕಗಳನ್ನು ಆಳುತ್ತಿದ್ದು, ಧರ್ಮ-ಅಧರ್ಮಗಳ ನಡುವಿನ ಸಮತೋಲನ ತಪ್ಪಿದಾಗ ಶ್ರೀಮಹಾ ವಿಷ್ಣುವು ರಾಮನಾಗಿ ಭೂಮಿಯಲ್ಲಿ ಅವತರಿಸುತ್ತಾರೆ. ಅಜೇಯ, ಅಮರ ಹಾಗೂ ಅಹಂಕಾರದಿಂದ ಬ್ರಹ್ಮಾಂಡವನ್ನೇ ನಡುಗಿಸುವ ಅಸುರ ಚಕ್ರವರ್ತಿ ರಾವಣನ ವಿರುದ್ಧ ರಾಮನು ನಡೆಸುವ ಧರ್ಮಯುದ್ಧವೇ ಈ ಮಹಾಕಾವ್ಯದ ಜೀವಾಳವಾಗಿದೆ.


ಈ ಮಹಾಕಾವ್ಯದಲ್ಲಿ ಭಾರತೀಯ ಚಿತ್ರರಂಗದ ಅದ್ಭುತ ಕಲಾವಿದರ ದಂಡೇ ಇದೆ. ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಕಾಣಿಸಿಕೊಂಡಿದ್ದರೆ, ಪ್ಯಾನ್ ಇಂಡಿಯಾ ಸ್ಟಾರ್ ‘ರಾಕಿಂಗ್ ಸ್ಟಾರ್’ ಯಶ್ ಅವರು ಬಲಶಾಲಿ ರಾವಣನ ಪಾತ್ರದಲ್ಲಿ ನಟಿಸುವುದರ ಜೊತೆಗೆ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಮೂಲಕ ಚಿತ್ರದ ಸಹ ನಿರ್ಮಾಪಕರೂ ಆಗಿದ್ದಾರೆ. ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ದೂರದರ್ಶನ ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ರಾಜ ದಶರಥನಾಗಿ, ಖ್ಯಾತ ನಟಿ ಶೋಭನಾ ಕೈಕೇಸಿಯಾಗಿ, ಅಜಿಂಕ್ಯ ದೇವ್ ಋಷಿ ವಿಶ್ವಾಮಿತ್ರನಾಗಿ, ಕುನಾಲ್ ಕಪೂರ್ ಇಂದ್ರ ದೇವನಾಗಿ ಮತ್ತು ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿಯಾಗಿದ್ದಾರೆ.


ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದಾರೆ. ವಿಶೇಷವೆಂದರೆ, ಪೂರ್ವ ಮತ್ತು ಪಶ್ಚಿಮದ ಅತಿದೊಡ್ಡ ಕೊಲ್ಯಾಬರೇಷನ್ ಎಂಬಂತೆ, ಆಸ್ಕರ್ ಪ್ರಶಸ್ತಿ ವಿಜೇತ ದಿಗ್ಗಜರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ ಖ್ಯಾತಿಯ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಈ ಚಿತ್ರಕ್ಕೆ ಸಂಗೀತ ನೀಡಿರೋದು ವಿಶೇಷ.
ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದು,ಈ ಅದ್ಭುತ ಚಿತ್ರವನ್ನು ನಿರ್ಮಿಸುತ್ತಿರುವ DNEG ಸಂಸ್ಥೆಯು ಸುಮಾರು 30 ವರ್ಷಗಳ ಅನುಭವ ಹೊಂದಿರುವ ಜಾಗತಿಕ ವಿಎಫ್‌ಎಕ್ಸ್ ಸಂಸ್ಥೆಯಾಗಿದ್ದು, ಇಲ್ಲಿಯವರೆಗೆ 8 ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’ ಇತ್ತೀಚೆಗೆ ‘ದ ಗಾರ್ಫೀಲ್ಡ್ ಮೂವಿ’ ನಿರ್ಮಿಸಿ ಜಾಗತಿಕವಾಗಿ ದೊಡ್ಡ ಯಶಸ್ಸು ಕಂಡಿದೆ. ಹಾಗೆಯೇ ‘ರಾಕಿಂಗ್ ಸ್ಟಾರ್’ ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಪ್ರಸ್ತುತ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರಗಳನ್ನು ಸಹ-ನಿರ್ಮಾಣ ಮಾಡುವ ಮೂಲಕ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ ರಾಮಾಯಣ ಚಿತ್ರ.
ಸೀತೆಯ ವಿಶೇಷ ಆಕರ್ಷಣೆ


ನಿತೇಶ್ ತಿವಾರಿ ಅವರ ಮಹಾಕಾವ್ಯ ರೂಪಾಂತರವಾದ ರಾಮಾಯಣ ದಲ್ಲಿ, ಸಾಯಿ ಪಲ್ಲವಿ ಸೀತಾ ದೇವಿಯ ಪಾತ್ರದಲ್ಲಿ ಗಮನಾರ್ಹವಾದ ಪ್ರಭಾವ ಬೀರುತ್ತಾರೆ, ಪರದೆಯ ಮೇಲೆ ಪ್ರಾಚೀನ, ಆಕರ್ಷಕ ಮತ್ತು ದೈವಿಕ ಪ್ರಭಾವಲಯವನ್ನು ತರುತ್ತಾರೆ. ಸ್ವಯಂವರ ಮತ್ತು ಅಯೋಧ್ಯೆಯ ರಾಜಮನೆತನದ ದೃಶ್ಯಗಳಂತಹ ಪ್ರಮುಖ ಕ್ಷಣಗಳಲ್ಲಿ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಅವರ ಚಿತ್ರಣವು ರಾಜಮನೆತನದ ಸಮತೋಲನವನ್ನು ಸುಲಭ, ಸ್ವರ್ಗೀಯ ಸರಳತೆಯೊಂದಿಗೆ ಸಮತೋಲನಗೊಳಿಸುತ್ತದೆ. ದೃಷ್ಟಿಗೋಚರವಾಗಿ, ಅವರ ಪ್ರಶಾಂತ ಮುಖಭಾವ ಮತ್ತು ಅಭಿವ್ಯಕ್ತಿಶೀಲ ಲಕ್ಷಣಗಳು ಚಿತ್ರದ ಭವ್ಯ ಸಿನಿಮೀಯ ಮಟ್ಟವನ್ನು ಆಧಾರವಾಗಿಟ್ಟುಕೊಂಡು ಶುದ್ಧತೆ ಮತ್ತು ಭಕ್ತಿಯ ಭಾವನೆಯನ್ನು ಹುಟ್ಟುಹಾಕುತ್ತವೆ.


ದೃಶ್ಯ ಸೊಬಗನ್ನು ಮೀರಿ, ಟ್ರೇಲರ್ ಸೀತೆಯ ಭಾವನಾತ್ಮಕ ಆಳ ಮತ್ತು ದೃಢ ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಭಗವಾನ್ ರಾಮನೊಂದಿಗೆ (ರಣಬೀರ್ ಕಪೂರ್ ನಿರ್ವಹಿಸಿದ್ದಾರೆ) ಹಂಚಿಕೊಂಡ ಸೌಮ್ಯ ಮತ್ತು ಪ್ರೀತಿಯ ಕ್ಷಣಗಳು ನಿರೂಪಣೆಯು ಕಷ್ಟಕ್ಕೆ ಬದಲಾಗುವ ಮೊದಲು ಆಧಾರವಾಗಿರುವ ಭಾವನಾತ್ಮಕ ತಿರುಳನ್ನು ಸ್ಥಾಪಿಸುತ್ತವೆ. ದುರಂತ ಸಂಭವಿಸಿದಾಗ ಮತ್ತು ರಾಮನನ್ನು 14 ವರ್ಷಗಳ ವನವಾಸ (ಗಡಿಪಾರು)ಕ್ಕೆ ಗಡೀಪಾರು ಮಾಡಿದಾಗ, ಸಾಯಿ ಪಲ್ಲವಿಯ ಅಭಿನಯವು ಸೀತೆಯ ದೃಢನಿಶ್ಚಯದ ಶಕ್ತಿಯನ್ನು ಸೆರೆಹಿಡಿಯುತ್ತದೆ, ಏಕೆಂದರೆ ಅವಳು ಆರಾಮವಾಗಿ ಹಿಂದೆ ಉಳಿಯುವ ಬದಲು ತನ್ನ ಗಂಡನೊಂದಿಗೆ ಕಾಡಿಗೆ ನಡೆಯಲು ದೃಢವಾಗಿ ಆರಿಸಿಕೊಳ್ಳುತ್ತಾಳೆ.


ಟ್ರೇಲರ್ ತನ್ನ ಗಾಢವಾದ ಪಾತ್ರಗಳಿಗೆ ಕಾಲಿಡುತ್ತಿದ್ದಂತೆ, ಪಲ್ಲವಿ ಶಾಂತ ಧೈರ್ಯದ ಜೊತೆಗೆ ದುರ್ಬಲತೆಯನ್ನು ಪರಿಣಾಮಕಾರಿಯಾಗಿ ತಿಳಿಸುತ್ತಾಳೆ. ಪ್ರಮುಖ ನಾಟಕೀಯ ಬೀಟ್‌ಗಳು – ಲಕ್ಷ್ಮಣ ರೇಖಾ ಬಳಿಯ ಉದ್ವಿಗ್ನ ಕ್ಷಣಗಳು ಮತ್ತು ಭಯಾನಕ ರಾವಣ (ಯಶ್ ನಿರ್ವಹಿಸಿದ) ಅವಳ ನಂತರದ ಅಪಹರಣ – ಭಯ ಮತ್ತು ಮಣಿಯದ ಚೈತನ್ಯ ಎರಡನ್ನೂ ತಿಳಿಸಲು ಅವಳ ಅಭಿವ್ಯಕ್ತಿಶೀಲ ಕಣ್ಣುಗಳನ್ನು ಬಳಸಿಕೊಳ್ಳುತ್ತವೆ. ಅವಳ ಚಿತ್ರಣವು ದೈವಿಕ ಅನುಗ್ರಹ ಮತ್ತು ಮಾನವ ಮೃದುತ್ವದ ಬಲವಾದ ಮಿಶ್ರಣವನ್ನು ನೀಡುತ್ತದೆ, ಇದು ಅವಳನ್ನು ಪೂರ್ವವೀಕ್ಷಣೆಯ ಅತ್ಯಂತ ಸ್ಮರಣೀಯ ಭಾವನಾತ್ಮಕ ಮುಖ್ಯಾಂಶಗಳಲ್ಲಿ ಒಂದನ್ನಾಗಿ ಮಾಡುತ್ತದೆ.
ರಾವಣನ ರಣಾರ್ಭಟ.. vs ರಾಮನ ಪರಾಕ್ರಮ.. ಬಾಲಿವುಡ್‌ ಬೆಳ್ಳಿತೆರೆಯಲ್ಲಿ ಕನ್ನಡದ ಹುಡುಗನ ವೀರಪ್ರತಾಪ!!


ಮಹರ್ಷಿ ವಾಲ್ಮೀಕಿ ರಾಮಾಯಣ ಬರೆವಾಗ, ಈ ಮಹಾಕಾವ್ಯಕ್ಕೆ ಯಾವ ಹೆಸರಿಡಬೇಕು ಎಂದು ಯೋಚಿಸಿದರಂತೆ ಏಕೆಂದರೆ,
ರಾಮಾಯಣಂ ಮಹತ್ಕಾವ್ಯಂ ಸೀತಾಯಾಶ್ಚರಿತಂ ಮಹತ್ |
ಪೌಲಸ್ತ್ಯವಧಮಿತ್ಯೇವ ಚಕಾರ ಚರಿತಂ ವ್ರತೀ ||
ರಾಮಾಯಣ ರಾಮನೊಬ್ಬನ ಕಥೆಯಲ್ಲ.. ಸೀತಾದೇವಿಯ ತ್ಯಾಗ, ಪಾತಿವ್ರತ್ಯ, ಕಷ್ಟಗಳು, ಆಕೆಯ ದಿವ್ಯ ಗುಣಗಳೇ ಪ್ರಮುಖ ಪಾತ್ರ ವಹಿಸುವುದರಿಂದ, ಅವರು ಇದನ್ನ “ಸೀತೆಯ ಮಹಾ ಚರಿತ್ರೆ” ಅಂತಲೂ ಗೌರವಿಸಿದರು.. ಸೀತೆಯಿಲ್ಲದೆ ರಾಮಾಯಣದ ಕಥೆಯೇ ಇಲ್ಲ… ಇನ್ನೊಬ್ಬನಂತು ರಾಮನ ಅವತಾರಕ್ಕೇ ಕಾರಣವಾದವನು.. ರಾವಣ.. ಅವನ ಮತ್ತೊಂದು ಹೆಸರು, ಪೌಲಸ್ತ್ಯ. ಪೌಲಸ್ತ್ಯವಧ ಅನ್ನೋದು ವಾಲ್ಮೀಕಿ ಮಹರ್ಷಿಗಳು ರಾಮಾಯಣಕ್ಕೆ ನೀಡಿದ ಮತ್ತೊಂದು ಪ್ರಮುಖ ಹೆಸರು. ಬ್ರಹ್ಮನ ಮಾನಸ ಪುತ್ರನಾದ ‘ಪುಲಸ್ತ್ಯ’ ಮಹರ್ಷಿಗಳ ವಂಶಸ್ಥನೇ ಈ ರಾವಣ..ರಾವಣ ರಾಕ್ಷಸನಾಗಿದ್ದರೂ, ಅವನು ಹುಟ್ಟಿನಿಂದ ಶ್ರೇಷ್ಠ ಬ್ರಾಹ್ಮಣ ವಂಶಕ್ಕೆ ಸೇರಿದವನು. ಬ್ರಹ್ಮನ ಮಗ ಪುಲಸ್ತ್ಯ ಮಹರ್ಷಿ ಅವರ ಮಗ ವಿಶ್ರವಸ್ಸು ವಿಶ್ರವಸ್ಸನ ಮಗ ರಾವಣ ಹಾಗಾಗಿ ರಾವಣನನ್ನು ‘ಪೌಲಸ್ತ್ಯ’ ಅಂತ ಕರೀತಾರೆ.. ಅವನನ್ನು ಕೊಲ್ಲುವುದು ಅಥವಾ ಸಂಹಾರ ಮಾಡೋದು ಅನ್ನೋ‌ ಅರ್ಥದಲ್ಲಿ “ರಾವಣನ ಸಂಹಾರದ ಕಥೆ.” ಎಂದು ಕರೆದರು..
ಇಡೀ ರಾಮಾಯಣದ ಕಥೆಯ ಮುಖ್ಯ ಉದ್ದೇಶಗಳಲ್ಲಿ ಲೋಕಕಂಟಕನಾದ ರಾವಣನ ನಿಗ್ರಹವೂ ಒಂದಾಗಿತ್ತು.. ದುಷ್ಟ ಶಕ್ತಿಯ ನಾಶ ಮತ್ತು ಧರ್ಮದ ಸಂಸ್ಥಾಪನೆ ರಾಮನ ಅವತಾರದ ಉದ್ದೇಶ.. ವಾಲ್ಮೀಕಿ ಮಹರ್ಷಿಗಳು ಈ ಮಹಾಕಾವ್ಯವನ್ನ ಕೇವಲ ಶ್ರೀರಾಮನ ದೃಷ್ಟಿಕೋನದಿಂದ ಮಾತ್ರವಲ್ಲದೆ, ನಾಯಕನ ದಿವ್ಯತೆ (ರಾಮಾಯಣ) ನಾಯಕಿಯ ತ್ಯಾಗ (ಸೀತಾಯಾಶ್ಚರಿತಂ ಮಹತ್) ಮತ್ತು ಖಳನಾಯಕನ ಅಂತ್ಯ (ಪೌಲಸ್ತ್ಯವಧ) ಹೀಗೆ ಮೂರೂ ಆಯಾಮಗಳಿಂದ ನೋಡಿದ್ದರು..
ಆದರೆ ಈಗ, ಕಾಲ ಬದಲಾಗಿದೆ… ಪ್ರತಿ ಕಾಲವೂ ರಾಮಾಯಣವನ್ನು ತನ್ನ ದೃಷ್ಟಿಯಲ್ಲಿ ನೋಡುತ್ತದೆ.. ಈಗ ಬರುತ್ತಿರುವ ರಾಮಾಯಣ ಸಿನಿಮಾ ಕೂಡ ಅದೇ ಪ್ರಯತ್ನ ಮಾಡುತ್ತಿದೆ…
ರಾವಣನ ಕತೆಯನ್ನೇ ವೈಭವದಿಂದ ಹೇಳುವಂತೆ ಕಾಣುತ್ತಿದೆ.. ರಾವಣನಾಗಿ ಅಬ್ಬರಿಸಿರೋ ಯಶ್ ಆರ್ಭಟವೇ ಇಡೀ ಸಿನಿಮಾನ ಆವರಿಸಿಕೊಂಡ ಹಾಗಿದೆ..
ಏನೇ ಹೇಳಿ ಕನ್ನಡದ ಹುಡುಗನೊಬ್ಬ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ್ದು ಕನ್ನಡಿಗರ ಹೆಮ್ಮೆ.. ರಾಮಾಯಣವನ್ನ ಯಾರು ಯಾವ ದೃಷ್ಟಿಯಿಂದ ಹೇಳಿದರೂ ಅದರ ಆತ್ಮ “ಧರ್ಮ”ವೇ ಆಗಿರಬೇಕು.. ಟ್ರೇಲರ್ ಸೊಗಸಾಗಿದೆ.. ಕುತೂಹಲ ಮೂಡಿಸಿದೆ.. ಈಗ ಆ ಕುತೂಹಲವನ್ನ ಸಿನಿಮಾ ಎಷ್ಟು ಚೆನ್ನಾಗಿ ಉಳಿಸಿಕೊಳ್ಳುತ್ತದೆ ಎನ್ನುವುದನ್ನು ನೋಡಬೇಕು..

support our advertisers
Scroll to Top