ಓಟಿಟಿಯಲ್ಲಿ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಗಳ ಸಿನಿಮಾಗಳು

ಇತ್ತೀಚೆಗೆ ಒ ಟಿ ಟಿ ಯಲ್ಲಿ ಬಿಡುಗಡೆಯಾದ ಸೂಪರ್ ಸ್ಟಾರ್ ಗಳ ಚಿತ್ರಗಳು ನಿಜಕ್ಕೂ ಸದ್ದು ಮಾಡುತ್ತಿವೆ. ಈ ಮೂರು ಚಿತ್ರಗಳು ಒಂದು ರೇಂಜ್ ಗೆ ದೊಡ್ಡ ಬಜೆಟ್ ನ ಸಿನಿಮಾಗಳಾಗಿದ್ದು ಥೀಯೇಟರ್ ಗಳಲ್ಲಿ ಉತ್ತಮ ಗಳಿಕೆ ಕಂಡು ಒ ಟಿ ಟಿ ಗೆ ಲಗ್ಗೆ ಇಟ್ಟಿದೆ!

ಆ ಮೂರು ಚಿತ್ರಗಳು ಯಾವುದು ಎಂದು ನೋಡೋಣ. ಕಳೆದ ಮೇ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿರುವ ಸೂರ್ಯ, ತ್ರಿಷಾ ಅಭಿನಯದ ಕರುಪ್ಪು, RJ ಮತ್ತು ರಿಯಾಲಿಟಿ ಶೋಗಳಿಂದ ಫೇಮಸ್ ಆಗಿರುವ RJ ಬಾಲಾಜಿ ಮುಖ್ಯ ಖಳನ ಪಾತ್ರದಲ್ಲಿ ಅಭಿನಯಿಸಿ ನಿರ್ದೇಶಕನಾಗಿಯೂ ಯಶಸ್ಸು ಕಂಡ ಚಿತ್ರ.

ಜೈ ಭೀಮ್ ನಂತರ ಕರಿ ಕೋಟು ಧರಿಸಿರುವ ಸೂರ್ಯ, ಅತಿಮಾನುಷ ಶಕ್ತಿಯಿರುವ ಕರುಪ್ಪು ಸ್ವಾಮಿಯಾಗಿ ರಂಜಿಸುತ್ತಾರೆ.ಥೀಯೇಟರ್ಗೆ ಬಂದು ಒಂದು ತಿಂಗಳ ಒಳಗೆ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಜೂನ್ 5 ರಂದು ಬಿಡುಗಡೆಯಾದ ಕನ್ನಡ ಚಿತ್ರ ಕೆಡಿ ದಿ ಡಿವಿಲ್ ಮತ್ತು ಮಲಯಾಳಂ ನ Patriort ಎರಡೂ ಬಹು ತಾರಾ ಗಣವಿರುವ ಚಿತ್ರಗಳು. ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ, ಸಂಜಯ್ ದತ್ ರವಿಚಂದ್ರನ್ ರಮೇಶ್ ಸುದೀಪ್ ರಂತ ಘಟಾನುಘ ಟಿಗಳು ಅಭಿನಯಿಸಿದ್ದು ಒಂದಷ್ಟು ವಾರ ಸಿನಿಮಾದ ಕಲೆಕ್ಷನ್ ಚಿತ್ರಮಂದಿರಗಳಲ್ಲಿ ಚೆನ್ನಾಗಿತ್ತು. ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾದ ಅತೀ ದೊಡ್ಡ ಚಿತ್ರ ಇದಾಗಿತ್ತು.

ಮಮ್ಮಟಿ ಮತ್ತು ಮೋಹನ್ ಲಾಲ್ ನಟಿಸಿದ್ದ Patroit ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತ್ತು . Z5 ನ ಮಾಹಿತಿ ಪ್ರಕಾರ ‘ಕೆಡಿ ‘ಮತ್ತು ‘Patroit_ ಎರಡು ಚಿತ್ರಗಳು ಹೆಚ್ಚಿನ ವೀಕ್ಷಣೆಗೆ ಒಳಪಟ್ಟಿವೆ

.ಮುಂದಿನ ವಾರ ಮಲಯಾಳಂನ ಇತ್ತೀಚಿನ 200 ಕ್ಲಬ್ ಸೇರಿರುವ ‘ದ್ರಶ್ಯಂ 3’ OTT ಗೆ ಬರಲಿದೆ. ಈ ತಿಂಗಳ ಕೊನೆಯ ವಾರದಲ್ಲಿ ಅವತಾರ್ ಫೈರ್ ಅಂಡ್ ಆಶ್ ಕೂಡ ಬಿಡುಗಡೆಯಾಗಲಿದೆ.ಅಲ್ಲಿಯ ತನಕ ಮೇಲೆ ತಿಳಿಸಿದ ಸೂಪರ್ ಸ್ಟಾರ್ ಗಳು ನಟಿಸಿರುವ ಚಿತ್ರಗಳು ಅವ್ಯಾಹತವಾಗಿ ವೀಕ್ಷಣೆಗೆ ಒಳ ಪಡಬಹುದು.

support our advertisers
Scroll to Top