ಇಂದಿನಿಂದ ಓಟಿಟಿ ಗೆ ಕನ್ನಡದ ಎರಡು ಚಿತ್ರಗಳು

ಈ ವಾರ ಕನ್ನಡದ ಎರಡು ಚಿತ್ರಗಳು OTT ಗೆ ಲಗ್ಗೆ ಇಟ್ಟಿದೆ. ಈ ವರ್ಷದ ಸೂಪರ್ ಹಿಟ್ ಚಿತ್ರಗಳೊಂದಾದ ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿದ’ ಲವ್ ಮೊಕ್ಟೈಲ್ 3′ Z5 ನಲ್ಲಿ ಇಂದಿನಿಂದ ರಂಜಿಸಲಿದೆ

.ಮಾರ್ಚ್ ತಿಂಗಳ 19ರಂದು ಬಿಡುಗಡೆಯಾದ ಈ ಫ್ಯಾಮಿಲಿ ಡ್ರಾಮಾ ಸಿನಿಮಾ,ಈಗಾಗಲೇ ಥೀಯೇಟರ್ ನಲ್ಲಿ ಯಶಸ್ವೀಯಾಗಿ ಚಿತ್ರ ಪ್ರದರ್ಶನಗೊಂಡು ಸದ್ಯದಲ್ಲೇ 50ನೇ ದಿನ ಪೂರೈಸಲಿದೆ

.ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟನೆ ಜೊತೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಬೇಬಿ ಸಂವೃತ, ಅಮೃತ ಅಯ್ಯಂಗಾರ್ , ದಿಲೀಪ್ ರಾಜ್ , ಅಮೃತ ಅಯ್ಯಂಗಾರ್, ಶ್ವೇತಾ ಪ್ರಸಾದ್ ಮತ್ತು ಇತರರು ನಟಿಸಿದ್ದಾರೆ. ನಕುಲ್ ಅಭಯಂಕರ್ ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಈ ಹಿಂದೆ ಎರಡು ಭಾಗಗಳನ್ನು ನೋಡಿರುವ ಪ್ರೇಕ್ಷಕರಿಗೆ ತಂದೆ ಮತ್ತು ಮತ್ತು ಮಗಳ ಬಾಂದವ್ಯ ದ ಕುರಿತಾದ ಈ ಚಿತ್ರ ಇಷ್ಟವಾಗಲಿದೆ

.ಲವ್ ಮೊಕ್ಟೈಲ್ ಫ್ರ್ಯಾಂಚಿಸೀಯ ಕೊನೆಯ ಭಾಗವನ್ನು ಥೀಯೇಟರ್ನಲ್ಲಿ ಮಿಸ್ ಮಾಡಿಕೊಂಡ ವೀಕ್ಷಕರುಮನೆಯಲ್ಲಿ ಕುಟುಂಬ ಸಮೇತ ಕೂತು ನೋಡಬಹುದು.

ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಬಿಗ್ ಬಾಸ್ ಹೊರಗಡೆ ಬಂದ ನಂತರ ಬಿಡುಗಡೆಯಾದ ‘ಸೂಪರ್ ಹಿಟ್ ‘ಚಿತ್ರ ಹೆಸರಿಗೆ ತಕ್ಕಂತೆ ಸೂಪರ್ ಹಿಟ್ ಆಗದೇ ಇದ್ದರೂ ಕೂಡ, ಸಿನಿಮಾ ಗಿಲ್ಲಿ ನಟನ ಅಭಿಮಾನಿಗಳಿಗೆ ಇಷ್ಟವಾಗಿತ್ತು. ರೋಡ್ ಟ್ರಿಪ್ ನಲ್ಲಿ ನಡೆಯುವ ಕಾಮಿಡಿ ಕ್ರೈಂ ಥ್ರಿಲ್ಲೆರ್ ಇದಾಗಿದೆ.

ಗಿಲ್ಲಿ ನಟನ ಜೊತೆ ಅಮೃತ ಅಂಜನ್ ಖ್ಯಾತಿಯ ಗೌರವ್ ಶೆಟ್ಟಿ ಕೂಡ ಅಭಿನಯಸಿದ್ದು, ಸಾಧು ಕೋಕಿಲ ಸೇರಿ ಹಾಸ್ಯ ನಟರು ಚಿತ್ರದುದ್ದಕ್ಕೂ ಕಚಗುಳಿ ನೀಡಲಿದ್ದಾರೆ.ಕಳೆದ ಫೆಬ್ರವರಿ 27ರಂದು ಬಿಡುಗಡೆಯಾದ ಈ ಚಿತ್ರ ಈಗ ಸನ್ ನೆಕ್ಸ್ಟ್ ನಲ್ಲಿ ಲಭ್ಯವಿದೆ.

support our advertisers
Scroll to Top