✍️ಶರತ್ ಚಂದ್ರ
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆ. ವಿ. ಎನ್ ಪ್ರೊಡಕ್ಷನ್ಸ್ ನಿರ್ಮಿಸಿದ ‘ಜನನಾಯಗನ್’ ಚಿತ್ರಕ್ಕೆ ಬಿಡುಗಡೆ ದಿನಾಂಕ ಘೋಷಿಸಿದ ದಿನಾಂಕ ದಿಂದ ಒಂದಿಲ್ಲ ಒಂದು ಸಂಕಷ್ಟಗಳು ಎದುರಾಗುತ್ತಾ ಬಂದಿವೆ. ಸೆನ್ಸರ್ ಸಮಸ್ಯೆಯಿಂದ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿದ ವಿಷಯ ನಿಮಗೆಲ್ಲ ಗೊತ್ತಿದೆ
ನಂತರ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆಯಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು. ರಾಜಕೀಯ ಪ್ರವೇಶಿಸಿದ ವಿಜಯ್ ತಳಪತಿ ಅವರ ಕೊನೆಯ ಚಿತ್ರ ಇದಾಗಿದ್ದು, ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಂದ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು.

ಆದರೆ ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಚಿತ್ರದ ಒಂದಷ್ಟು ದೃಶ್ಯಗಳನ್ನು ಲೀಕ್ ಮಾಡಿ ವಾಟ್ಸಪ್ ಮತ್ತು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿಬಿಡುತ್ತಿದ್ದಾರೆ. ಈ ಬಗ್ಗೆ ಕೆ.ವಿ. ಎನ್ ಸಂಸ್ಥೆಯು ಈ ದುಷ್ಕರ್ತ್ಯ ಮಾಡಿದವರ ವಿರುದ್ಧ ಕಾನೂನಿನ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಹಾಗೂ ಈ ವಿಡಿಯೋಗಳನ್ನು ಶೇರ್ ಮಾಡಿದವರ ವಿರುದ್ಧ ಕೂಡ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ಪಬ್ಲಿಕ್ ನೋಟೀಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಗೆಳೆಯ ವಿಜಯ್ ಗೆ ನಟ ಸೂರ್ಯ ಸಾಥ್.
ಕಾಲಿವುಡ್ ನ ಇನ್ನೊಬ್ಬ ಸೂಪರ್ ಸ್ಟಾರ್ ಸೂರ್ಯ ಶಿವಕುಮಾರ್ ತಮ್ಮ X ಖಾತೆಯಲ್ಲಿ ಈ ಬೆಳವಣಿಗೆಯನ್ನು ಖಂಡಿಸಿ, ಚಿತ್ರತಂಡದ ಶ್ರಮ ಹಾಗೂ ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರ ಬಗ್ಗೆ ಬೆಲೆ ಕೊಡಿ, ದಯವಿಟ್ಟು ಇಂತಹ ಕ್ಲಿಪ್ಸ್ಗಳನ್ನು ಯಾರೂ ನೋಡಬೇಡಿ ಹಾಗೂ ಯಾರಿಗೂ ಕಳುಹಿಸಬೇಡಿ ಎಂದು ಮನವಿ ಮಾಡಿದ್ದಾರೆ
. ಒಬ್ಬ ನಟನಿಗೆ ಸಂಕಷ್ಟ ಬಂದಾಗ ಒಳಗೊಳಗೆ ಖುಷಿಪಡುವ ಈ ಕಾಲದಲ್ಲಿ ಸೂರ್ಯ ಅವರ ಈ ನಡೆ ಬಗ್ಗೆ ವಿಜಯ್ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಒಂದಷ್ಟು ಜನ ಪೈರಸಿ ವಿರುದ್ಧ ಬರೆದು ಕೊಂಡು ನಾವು ಈ ಹೋರಾಟದಲ್ಲಿ ನಿಮ್ಮೊಂದಿಗಿದ್ದೇವೆ ಎಂದು ತಿಳಿಸಿದ್ದಾರೆ.

ಕೆಲವು ಜನ ಇದು ಪ್ರಚಾರದ ತಂತ್ರ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಜನ ಇದು ರಾಜಕೀಯ ಪ್ರೇರಿತ ಕ್ರಮವಾಗಿದ್ದು ವಿಜಯ್ ಅವರ ರಾಜಕೀಯ ಜೀವನ ಆರಂಭವಾಗುವ ಮೊದಲೇ ಮುಗಿಸುವ ಹುನ್ನಾರ ಇದಾಗಿದೆ ಎಂದು ಚರ್ಚೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ತಮಿಳುನಾಡಿನ ರಾಜಕೀಯಕ್ಕೆ ಕೆ. ವಿ. ಎನ್ ಸಂಸ್ಥೆ ಮತ್ತು ಚಿತ್ರದ ಹಂಚಿಕೆದಾರರು ಬಲಿ ಪಶುಗಳಾಗಿರುವುದಂತು ಸತ್ಯ.

