
ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಮಣಿರತ್ನಂ ಕೂಡ ಒಬ್ಬರು. ಇತ್ತೀಚಿನ ಯುವ ನಿರ್ದೇಶಕರ ಸ್ಪರ್ಧೆಯ ನಡುವೆ ಕೂಡ ತನ್ನತನವನ್ನು ಕಳೆದು ಕೊಳ್ಳದೆ ಉತ್ತಮ ಚಿತ್ರಗನ್ನು ನೀಡುತ್ತಾ ಬಂದಿದ್ದಾರೆ. ಇದಕ್ಕೆ ಅವರು ಕೆಲವು ವರ್ಷಗಳ ಹಿಂದೆ ನಿರ್ದೇಶಿಸಿದ ಪೊನ್ನಿ ಯನ್ ಸೇಲ್ವಂ ಭಾಗ ಒಂದು ಮತ್ತು ಎರಡು ಚಿತ್ರಗಳೇ ಸಾಕ್ಷಿ.ಅವರು ತಮ್ಮ ಮದ್ರಾಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ ನಿರ್ದೇಶಿಸಿದ ಕಮಲ್ ಹಾಸನ್ ನಾಯಕ ನಟನಾಗಿ ನಟಿಸಿರುವ ‘ಥಗ್ ಲೈಫ್ ‘ ಚಿತ್ರದ ಮೂಲಕ ಮಣಿರತ್ನಂ ಮತ್ತು ಕಮಲ್ ಹಾಸನ್ ಜೋಡಿ ಬಹಳ ವರ್ಷಗಳ ನಂತರ ಒಂದಾಗಿತ್ತು. ಆದರೆ ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿರಲಿಲ್ಲ. ಈಗ ಮಣಿರತ್ನಂ ಮತ್ತೆ ಮೈ ಕೊಡವಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.ಲ್ಯೆಕಾ ನಿರ್ಮಾಣ ಸಂಸ್ಥೆ ಸಹಯೋಗದಲ್ಲಿ ತಮ್ಮ ಮದ್ರಾಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ 23ನೇ ಕೊಡುಗೆಯಾಗಿ ಇನ್ನೂ ಹೆಸರಿಡದ ಚಿತ್ರ ಲಾಂಚ್ ಮಾಡುತ್ತಿದ್ದಾರೆ .ಈ ಬಗ್ಗೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿಶೇಷವೆಂದರೆ ಚಿತ್ರದ ಸ್ಟಾರ್ ಕಾಸ್ಟ್. ಹೌದು! ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ನಾಯಕ ನಾಯಕಿಯಾರಾಗಿ ನಟಿಸುತ್ತಿರುವ ವಿಷಯ ತಿಳಿದು ಸಿನಿ ಪ್ರೇಕ್ಷಕರು ನಿಜಕ್ಕೂ ಥ್ರಿಲ್ ಆಗಿದ್ದಾರೆ.ಇವರಿಬ್ಬರ ಅಭಿನಯ ಸಾಮರ್ಥ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದಕ್ಕಿಂತ ಹೆಚ್ಚಾಗಿ ಮಣಿರತ್ನಂ ಇವರನ್ನು ನಿರ್ದೇಶಿಸುತ್ತಿರುವುದು ಈ ಚಿತ್ರದ ಮೇಲೆ ಜನರ ನಿರೀಕ್ಷೆ ದುಪ್ಪಟ್ಟು ಆಗಲಿದೆ. ಮಣಿರತ್ನಂ ಅವರ ಹೆಚ್ಚಿನ ಚಿತ್ರಗಳಿಗೆ ಸಂಗೀತ ನೀಡಿರುವ ಎ. ಆರ್. ರೆಹಮಾನ್ ಈ ಚಿತ್ರಕ್ಕೆ ಕೂಡ ಸಂಗೀತ ನೀಡುತ್ತಿರುವುದು ವಿಶೇಷ.ಈ ಹಿಂದೆ ಮಣಿರತ್ನಂ ಚಿಯಾನ್ ವಿಕ್ರಂ ಪುತ್ರ ಧ್ರುವ ವಿಕ್ರಂಗೆ ಲವ್ ಸ್ಟೋರಿ ಆಧಾರಿತ ಚಿತ್ರವೊಂದನ್ನು ನಿರ್ದೇಶಿಸಬೇಕಿತ್ತು.ಆದರೆ ಆ ಚಿತ್ರ ಸೆಟ್ಟೆರಲಿಲ್ಲ. ಆದರೆ ಈಗ ವಿಜಯ್ ಸೇತುಪತಿ ನಟಿ ಸಲಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.ಈ ತಮಿಳ್ ಪ್ರಾಜೆಕ್ಟ್ ಬಗ್ಗೆ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರು ಕೂಡ ಎದುರು ನೋಡುವಂತಹ ಚಿತ್ರ ಇದಾಗಲಿದೆ.




