ಧ್ರುವಂತ್ ಹೊಸ ಫೋಟೊ ಶೂಟ್ ವೈರಲ್ – ಫೋಟೊಗಳಿಗೆ ಹುಡುಗಿಯರು ಫಿದಾ

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಧ್ರುವಂತ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್​ ಆಗಿದ್ದು, ತಮ್ಮ ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಫೋಟೊ ಶೂಟ್‌ನಲ್ಲಿ ವೆಸ್ಟರ್ನ್ ಮತ್ತು ಸ್ಟೈಲಿಶ್ ಔಟ್‌ಫಿಟ್‌ಗಳಲ್ಲಿ ಧ್ರುವಂತ್ ಮಿಂಚಿದ್ದಾರೆ.

ಅವರ ಫಿಟ್ನೆಸ್ ಮತ್ತು ಹ್ಯಾಂಡ್ಸಮ್ ಲುಕ್​ ಅಭಿಮಾನಿಗಳ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಮ್‌ನ ತಮ್ಮ ಖಾತೆಯಲ್ಲಿ ಈ ಫೋಟೊಗಳನ್ನ ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿವೆ.

ಬಿಗ್ ಬಾಸ್‌ನಲ್ಲಿ ತಮ್ಮ ಸೌಮ್ಯ ಸ್ವಭಾವ ಮತ್ತು ಕಠಿಣ ಪರಿಶ್ರಮದಿಂದ ಗುರುತಿಸಿಕೊಂಡಿದ್ದ ಧ್ರುವಂತ್ ಈಗ ಮಾಡೆಲಿಂಗ್ ಮತ್ತು ಸಿನಿಮಾ ಕ್ಷೇತ್ರದತ್ತ ಗಮನ ಹರಿಸುತ್ತಿರುವ ಸೂಚನೆ ನೀಡಿದ್ದಾರೆ.

ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಜನಪ್ರಿಯ ಸೂಪರ್ – ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಒಂದಾದ BMW S 1000 RR ಜೊತೆ ಫೋಟೊ ತೆಗಿಸಿಕೊಂಡಿದ್ದು, ಭಾರತದಲ್ಲಿ ಈ ಬೈಕ್‌ನ ಬೆಲೆ ಸುಮಾರು ₹20.75 ಲಕ್ಷದಿಂದ ಪ್ರಾರಂಭವಾಗಿ ₹25.25 ಲಕ್ಷದವರೆಗೆ ಇರುತ್ತದೆ.ಧ್ರುವಂತ್ ಅವರ ಈ ಹೊಸ ಅವತಾರವು ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಕುತೂಹಲ ಮೂಡಿಸಿವೆ. ಈ ರೀತಿಯ ಹೈ-ಪ್ರೊಫೈಲ್ ಫೋಟೊ ಶೂಟ್‌ಗಳು ಸಾಮಾನ್ಯವಾಗಿ ಹೊಸ ಸಿನಿಮಾಗಳ ಅಥವಾ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳ ಮುನ್ಸೂಚನೆಯಾಗಿರುತ್ತವೆ.ಸದ್ಯ ಧ್ರುವಂತ್ ಸ್ಯಾಂಡಲ್‌ವುಡ್‌ನಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

support our advertisers
Scroll to Top